Hardik Pandya -ಬುಮ್ರಾ ಬಗ್ಗೆ ಹಾರ್ದಿಕ್ ಪಾಂಡ್ಯ ಟ್ವೀಟ್
Hardik Pandya | ಬುಮ್ರಾ ಬಗ್ಗೆ ಹಾರ್ದಿಕ್ ಪಾಂಡ್ಯ ಎಮೋಷನಲ್ ಟ್ವೀಟ್
ಟಿ 20 ವಿಶ್ವಕಪ್ ಗೆ ಟೀಂ ಇಂಡಿಯಾದ ಸ್ಟಾರ್ ಬೌಲರ್ ಜಸ್ಪ್ರಿತ್ ಬುಮ್ರಾ ದೂರವಾಗಿರುವ ಬಗ್ಗೆ ಬಿಸಿಸಿಐ ಸ್ಪಷ್ಟಪಡಿಸಿದೆ.
ಈ ಬಗ್ಗೆ ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಎಮೋಷನಲ್ ಟ್ವೀಟ್ ಮಾಡಿದ್ದು, ಮೈ ಜರ್ಸಿ ನೀನು. ನೀನು ಎಂದಿನಂತೆ ಬಲವಾಗಿ ವಾಪಸ್ ಬರಬೇಕು ಎಂದು ಲವ್ ಸಿಂಬಲ್ಸ್ ಗಳೊಂದಿಗೆ ಬರೆದುಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯ ಟ್ವೀಟ್ ಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಟಿ 20 ವಿಶ್ವಕಪ್ ಮಿಸ್ ಮಾಡಿಕೊಂಡಿರುವ ಬಗ್ಗೆ ಬುಮ್ರಾ ಟ್ವೀಟ್ ಮಾಡಿದ್ದು, ನಾನು ಈ ಬಾರಿ ಟಿ 20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ಭಾಗವಾಗಲ್ಲ ಅಂತಾ ತಿಳಿದ ಮೇಲೂ ನಾನು ಧೈರ್ಯವಾಗಿದ್ದೇನೆ. ನಾನು ಶೀಘರ್ ಚೇತರಿಸಿಕೊಳ್ಳಬೇಕು ಎಂದು ಪ್ರಾರ್ಥಿಸಿದ, ನನ್ನ ಸ್ನೇಹಿತರಿಗೆ, ಅಭಿಮಾನಿಗಳಿಗೆ ಕೃತಜ್ಞತೆಗಳು ಎಂದು ಬರೆದುಕೊಂಡಿದ್ದಾರೆ.

ಬೆನ್ನು ನೋವಿನಿಂದ ಬಳಲುತ್ತಿರುವ ಜಸ್ ಪ್ರಿತ್ ಬುಮ್ರಾ ಮೊದಲು ದಕ್ಷಿಣ ಆಫ್ರಿಕಾ ಸರಣಿಗೆ ದೂರವಾಗಿದ್ದರು. ಈ ಬಗ್ಗೆ ಮಾತನಾಡಿದ್ದ ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬುಮ್ರಾ ದಕ್ಷಿಣ ಆಪ್ರಿಕಾ ಸರಣಿಯಿಂದ ಮಾತ್ರ ದೂರವಾಗಿದ್ದಾರೆ. ಅವರು ಟಿ 20 ವಿಶ್ವಕಪ್ ಗೆ ಸಂಪೂರ್ಣವಾಗಿ ದೂರವಾಗಿಲ್ಲ ಎಂದಿದ್ದರು.
ಆದ್ರೆ ಇದೀಗ ಬುಮ್ರಾ ವಿಶ್ವಕಪ್ ನಿಂದ ದೂರವಾಗಿರುವುದು ತಂಡಕ್ಕೆ ದೊಡ್ಡ ಹೊಡೆತವಾಗಿದೆ. 2016ರಲ್ಲಿ ಟೀಂ ಇಂಡಿಯಾ ಪರ ಮೊದಲ ಟಿ 20 ಪಂದ್ಯವನ್ನಾಡಿದ ಬುಮ್ರಾ ಈವರೆಗೂ 57 ಪಂದ್ಯಗಳನ್ನಾಡಿದ್ದಾರೆ. 67 ವಿಕೆಟ್ ಪಡೆದಿದ್ದಾರೆ.