100 ಸಿಕ್ಸರ್ ಗಳ ಕ್ಲಬ್  ಹಾರ್ದಿಕ ಪಾಂಡ್ಯ ಹೊಸ ಎಂಟ್ರಿ…

1 min read

100 ಸಿಕ್ಸರ್ ಗಳ ಕ್ಲಬ್  ಹಾರ್ದಿಕ ಪಾಂಡ್ಯ ಹೊಸ ಎಂಟ್ರಿ…

ಚುಟುಕು ಕ್ರಿಕೆಟ್ ಮಹಾಸಮರದಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್‍ನಿಂದ ಲೇ ಸದ್ದು ಮಾಡಿರುವ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, 100 ಸಿಕ್ಸರ್ಗಳ ಕ್ಲಬ್ ಸೇರುವ ಮೂಲಕ ಹೊಸದೊಂದು ಮೈಲುಗಲ್ಲು ದಾಟಿದ್ದಾರೆ.

ಹೊಡಿಬಡಿ ಆಟದಲ್ಲಿ ಹಲವು ಮ್ಯಾಚ್ ವಿನ್ನಿಂಗ್ ಪ್ರದರ್ಶನಗಳನ್ನ ನೀಡಿರುವ ಹಾರ್ದಿಕ್ ಪಾಂಡ್ಯ, ಈಗಾಗಲೇ ಐಪಿಎಲ್ ನ ಸಿಕ್ಸರ್ ಗಳ ಸರದಾರರ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ.

ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿದ ಹಾರ್ದಿಕ್ ಪಾಂಡ್ಯ, ಆ ಮೂಲಕ ಐಪಿಎಲ್ ನಲ್ಲಿ  100 ಸಿಕ್ಸರ್ ಗಳ  ಕ್ಲಬ್ ಸೇರಿದರು. ಅಲ್ಲದೇ ಅತಿ ಕಡಿಮೆ ಎಸೆತಗಳಲ್ಲಿ  100 ಸಿಕ್ಸ ರ್ ಗಳ  ಸಾಧನೆ ಮಾಡಿದ ಮೊದಲ ಭಾರತೀಯ ಹಾಗೂ ವಿಶ್ವದ 3ನೇ ಬ್ಯಾಟ್ಸ್ ಮೆನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬಾಲ್ ಗಳ ಆಧಾರದಲ್ಲಿ ವೇಗವಾಗಿ 100 ಸಿಕ್ಸ್ ಗಳು ಸಿಡಿಸಿದ್ದವರ ಪೈಕಿ ಕೆಕೆಅರ್ ತಂಡದ ಆಂಡ್ರೆ ರಸೆಲ್ ಮೊದಲ ಸ್ಥಾನದಲ್ಲಿದ್ದಾರೆ. ರಸೆಲ್ 657 ಎಸೆತಗಳಲ್ಲಿ ನೂರು ಸಿಕ್ಸರ್ ಸಿಡಿಸಿದ್ದರು.

ಇನ್ನು ಕ್ರಿಸ್ ಗೇಯ್ಲ್ 943 ಬಾಲ್ ಗಳು,         ಹಾರ್ದಿಕ್ ಪಾಂಡ್ಯ 1046 ಬಾಲ್ ಗಳು,         ಕೈರನ್ ಪೆÇಲಾರ್ಡ್ 1094 ಎಸೆತಗಳು,

ಗ್ಲೆನ್ ಮ್ಯಾಕ್ಸ್ ವೆಲ್ 1118 ಬಾಲ್ ಗಳು,         ರಿಷಬ್ ಪಂತ್  1224 ಬಾಲ್ ಗಳು, 7. ಯೂಸುಫ್ ಪಠಾಣ್  1313 ಬಾಲ್ ಗಳು, ಯುವರಾಜ್ ಸಿಂಗ್  1336 ಬಾಲ್‍ಗಳಲ್ಲಿ ನೂರು ಸಿಕ್ಸರ್ ಗಳನ್ನು ಸಿಡಿಸಿದ್ದಾರೆ.

ಐಪಿಎಲ್ ನಲ್ಲಿ  ಟೀಂ ಇಂಡಿಯಾದ ಹಲವು ಬ್ಯಾಟ್ಸ್ ಮೆನ್ ಗಳು ಸ್ಪೋಟಕ ಆಟದಿಂದ ಅಬ್ಬರಿಸಿದ್ದು, ಈಗಾಗಲೇ 100 ಸಿಕ್ಸರ್ ಗಳನ್ನು ಸಿಡಿಸಿ ಮಿಂಚಿದ್ದಾರೆ.

ಐಪಿಎಲ್ನಲ್ಲಿ 2015ರಿಂದ 100 ಸಿಕ್ಸರ್ ಬಾರಿಸಿದ ಭಾರತದ ಆಟಗಾರರಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಮೊದಲ ಸ್ಥಾನದಲ್ಲಿದ್ದಾರೆ. ನಂತರದಲ್ಲಿ ವಿರಾಟ್ ಕೊಹ್ಲಿ, ಸಂಜೂ ಸ್ಯಾಮ್ಸನ್, ರಿಷಬ್ ಪಂತ್, ಎಂಎಸ್ ಧೋನಿ, ರೋಹಿತ್ ಶರ್ಮ, ಅಂಬಟಿ ರಾಯುಡು 100 ಸಿಕ್ಸರ್ ಗಳನ್ನು  ಸಿಡಿಸಿದ್ದು, ಇದೀಗ ಇವರ ಸಾಲಿಗೆ ಹಾರ್ದಿಕ್ ಪಾಂಡ್ಯ ಸೇರ್ಪಡೆಗೊಂಡಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd