Hardik Pandya : ಸಚಿನ್ ಅಲ್ಲ.. ದ್ರಾವಿಡ್ ಅಲ್ಲ.. ಪಾಂಡ್ಯ ನೆಚ್ಚಿನ ಕ್ರಿಕೆಟರ್ ಯಾರು ಗೊತ್ತಾ..?
ಸಾಮಾನ್ಯವಾಗಿ ಪ್ರತಿ ಕ್ರಿಕೆಟ್ ಅಭಿಮಾನಿಗಳೂ ಫೆವರೇಟ್ ಕ್ರಿಕೆಟರ್ ಇದ್ದೇ ಇರ್ತಾರೆ. ನಾನು ಕೂಡ ಹಾಗೇ..!! ಜಾಕ್ ಕ್ವಾಲೀಸ್, ಸಚಿನ್ ತೆಂಡ್ಯೂಲ್ಕರ್, ವಿರಾಟ್ ಕೊಹ್ಲಿ ಅಂದ್ರೆ ನನಗೆ ತುಂಬಾ ಇಷ್ಟ.
ಆದ್ರೆ ಎಷ್ಟೋ ಮಂದಿ ಲೆಜೆಂಡರಿ ಕ್ರಿಕೆಟರ್ಸ್ ಇದ್ದಾಗ ಒಬ್ಬರನ್ನ ಫೆವರೇಟ್ ಎಂದು ಹೇಳುವುದು ತುಂಬಾ ಕಷ್ಟು.
ಆದ್ರೆ ನನ್ನ ಅತ್ಯಂತ ಫೇವರೆಟ್ ಕ್ರಿಕೆಟರ್ ಯಾರೆಂದರೇ ಅದು ವಾಸೀಂ ಜಾಫರ್ ಎಂದು ಹೇಳುತ್ತೇನೆ ಎಂದು ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ.
ಜಾಫರ್ ಬ್ಯಾಟಿಂಗ್ ಮಾಡುವಾಗ ನಾನು ಸುಮ್ಮನೇ ಅವರನ್ನೇ ನೋಡುತ್ತಾ ಇರುತ್ತಿದೆ ಎಂದಿರುವ ಹಾರ್ದಿಕ್, ಉಳಿದ ದಿಗ್ಗಜ ಆಟಗಾರರಿಗೆ ಹೋಲಿಕೆ ಮಾಡಿದ್ರೆ ಜಾಫರ್ ಅವರಿಗೆ ನನ್ನ ಮನಸ್ಸಲ್ಲಿ ಮೊದಲ ಸ್ಥಾನ ಇದೆ ಎಂದು ಹಾರ್ದಿಕ್ ಹೇಳಿದ್ದಾರೆ.
ನಿಜ ಹೇಳಬೇಕು ಅಂದ್ರೆ ನಾನು ಅವರ ಬ್ಯಾಟಿಂಗ್ ಕಾಪಿ ಮಾಡಬೇಕೆಂದು ಪ್ರಯತ್ನಿಸಿದ್ದೆ. ಆದ್ರೆ ನಾನು ಅವರ ಕ್ಲಾಸ್ ಅನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

ಇನ್ನು ಬ್ಯಾಡ್ ಫಾರ್ಮ್ ನಿಂದಾಗಿ ಟೀಂ ಇಂಡಿಯಾದಿಂದ ದೂರ ಉಳಿದಿದ್ದ ಹಾರ್ದಿಕ್ ಪಾಂಡ್ಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಅದ್ಭುತ ಪ್ರದರ್ಶನ ನೀಡಿ ಟೀ ಇಂಡಿಯಾಗೆ ಕಮ್ ಬ್ಯಾಕ್ ಮಾಡಿದ್ದಾರೆ.
ಅವರು ತವರಿನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ 20 ಸರಣಿಗೆ ಆಯ್ಕೆ ಆಗಿದ್ದಾರೆ.
ಇನ್ನು ಈ ಬಾರಿಯ ಇಂಡಿಯನ್ ಪ್ರಿಮಿಯರ್ ನಲ್ಲಿ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ತಂಡವನ್ನು ಚಾಂಪಿಯನ್ ಮಾಡಿದರು.
ಚೊಚ್ಚಲ ಪ್ರಯತ್ನದಲ್ಲಿಯೇ ಗುಜರಾತ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಹಾರ್ದಿಕ್ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಹೀಗಾಗಿಯೇ ಅವರನ್ನ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20ಸರಣಿಗೆ ಆಯ್ಕೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಐಪಿಎಲ್ ಬಗ್ಗೆ ಮಾತನಾಡಿದ ಹಾರ್ದಿಕ್, ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿ ಅವರಿಂದಲೇ ನಾನು ಇಲ್ಲಿಯವರೆಗೂ ಬಂದಿದ್ದೇನೆ ಎಂದು ಕೃತಜ್ಞತಾ ಭಾವವನ್ನು ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ತಮ್ಮ ಫೇವರೇಟ್ ಕ್ರಿಕೆಟರ್ ಬಗ್ಗೆ ಕೇಳಿದ ಪ್ರಶ್ನೆಗೆ ಹಾರ್ದಿಕ್ ವಾಸೀಂ ಜಾಫರ್ ಎಂದು ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹಾರ್ದಿಕ್ ಪಾಂಡ್ಯ ಹೇಳಿಕೆ ವೈರಲ್ ಆಗುತ್ತಿದ್ದು, ಸಚಿನ್, ಸೆಹ್ವಾಗ್, ಧೋನಿ ಅಲ್ಲ… ವಾಸೀಂ ಜಾಫರ್.. ಸೂಪರ್.. ನಿಜವಾಗಿಯೂ ನೀವು ನಮ್ಮನ್ನ ಸರ್ಪ್ರೈಸ್ ಮಾಡಿದ್ದೀರಾ ಎಂದು ಫ್ಯಾನ್ಸ್ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.








