‘ಮುಂಬೈ ಇಂಡಿಯನ್ಸ್’ ನಿಂದ ದೂರಾದ ಹಾರ್ದಿಕ್ : ಭಾವನಾತ್ಮಕ ಪತ್ರದ ಮೂಲಕ ವಿದಾಯ..!
ಮುಂಬೈ ಇಂಡಿಯನ್ಸ್ ತಂಡ ಹಾರ್ದಿಕ್ ಪಾಂಡ್ಯರನ್ನ ಉಳಿಸಿಕೊಂಡಿಲ್ಲದೇ ಇರೋದ್ರಿಂದ ಹಾರ್ದಿಕ್ ಪಾಂಡ್ಯ ನಿರಾಸೆ ಅನುಭವಿಸಿದ್ದಾರೆ. ಈ ಬಗ್ಗೆ ಬೇಸರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ಮುಂಬೈ ಇಂಡಿಯನ್ಸ್ ಗೆ ಭಾವನಾತ್ಮಕ ವಿದಾಯ ಹೇಳಿದ್ದಾರೆ.
ಇಲ್ಲಿಯವರೆಗಿನ ಪ್ರಯಾಣದ ವೀಡಿಯೊವನ್ನು ಹಂಚಿಕೊಂಡು ಭಾವನಾತ್ಮಕವಾದ ಕ್ಯಾಪ್ಷನ್ ನೀಡಿದ್ದಾರೆ. ನಾನು ಈ ನೆನಪುಗಳನ್ನು ನನ್ನ ಜೀವನದುದ್ದಕ್ಕೂ ಮರೆಯೋದಿಲ್ಲ. ನನ್ನ ಜೀವನದುದ್ದಕ್ಕೂ ಈ ಕ್ಷಣಗಳು ನನ್ನೊಂದಿಗೆ ಇರುತ್ತವೆ.. ನಾನು ಮಾಡಿಕೊಂಡ ಸ್ನೇಹಿತರು, ನಾನ್ನ ಬಂಧಗಳು, ಜನರು, ಅಭಿಮಾನಿಗಳಿಗೆ ನಾನು ಎಂದೆಂದಿಗೂ ಕೃತಜ್ಞರಾಗಿರುತ್ತೇನೆ. ನಾನು ಆಟಗಾರನಾಗಿ ಮಾತ್ರವಲ್ಲದೆ ಮನುಷ್ಯನಾಗಿಯೂ ಬೆಳೆದಿದ್ದೇನೆ ಎಂದಿದ್ಧಾರೆ.
https://www.instagram.com/reel/CW-xB-JKh6L/?utm_source=ig_web_copy_link
ಪಾಂಡ್ಯ ಮತ್ತಷ್ಟು ಬರೆದುಕೊಂಡಿದ್ದಾರೆ, ‘ನಾನು ದೊಡ್ಡ ಕನಸುಗಳೊಂದಿಗೆ ಯುವ ಕ್ರಿಕೆಟಿಗನಾಗಿ ಇಲ್ಲಿಗೆ ಬಂದಿದ್ದೇನೆ. ನಾವು ಒಟ್ಟಿಗೆ ಗೆಲ್ಲುತ್ತೇವೆ, ಒಟ್ಟಿಗೆ ಸೋಲುತ್ತೇವೆ ಮತ್ತು ಒಟ್ಟಿಗೆ ಹೋರಾಡುತ್ತೇವೆ. ಈ ತಂಡದೊಂದಿಗೆ ಕಳೆದ ಪ್ರತಿ ಕ್ಷಣವೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳುತ್ತವೆ ಎಂದು ಅವರು ಹೇಳುತ್ತಾರೆ, ಆದರೆ ಮುಂಬೈ ಇಂಡಿಯನ್ಸ್ ಯಾವಾಗಲೂ ನನ್ನ ಹೃದಯದಲ್ಲಿರುತ್ತದೆ ಎಂದಿದ್ದಾರೆ.
https://www.instagram.com/reel/CW-xB-JKh6L/?utm_source=ig_web_copy_link








