Hardik Pandya : ಹಾರ್ದಿಕ್ ಪಾಂಡ್ಯ ನಾಕತ್ವದಲ್ಲಿ ಲಂಕಾ ಸರಣಿ..?
ಮುಂದಿನ ವರ್ಷ ತವರಿನಲ್ಲಿ ನಡೆಯುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ ಎನ್ನುವ ಸುಳಿವು ಸಿಕ್ಕಿದೆ.
ಪಂದ್ಯ ಪ್ರಸಾರ ಮಾಡುವ ಸ್ಟಾರ್ ಸೋರ್ಟ್ಸ್ ವಾಹಿನಿ ತನ್ನ ಟೀಸರ್ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕ ಎನ್ನುವ ರೀತಿಯಲ್ಲಿ ಬಿಂಬಿಸಿದೆ. ಶ್ರೀಲಂಕಾ ಸರಣಿಗೆ ಭಾರತ ತಂಡವನ್ನು ಇನ್ನು ಬಿಸಿಸಿಐ ಪ್ರಕಟಿಸಿಲ್ಲ. ನಾಯಕ ರೋಹಿತ್ ಶರ್ಮಾ ಬದಲು ಹಾರ್ದಿಕ್ ಪಾಂಡ್ಯ ಹಂಗಾಮಿ ನಾಯಕನಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ಬಾಂಗ್ಲಾ ಏಕದಿನ ಸರಣಿ ವೇಳೆ ರೋಹಿತ್ ಶರ್ಮಾ ಹೆಬ್ಬೆರೆಳಿಗೆ ಗಾಯ ಮಾಡಿಕೊಂಡಿದ್ದರು. ರೋಹಿತ್ ಗಾಯದಿಂದ ಇನ್ನು ಚೇತರಿಸಿಕೊಂಡಿಲ್ಲ ಎಂದು ತಿಳಿದು ಬಂದಿದೆ.
ಇನ್ನು ಉಪನಾಯಕ ಕೆ.ಎಲ್.ರಾಹುಲ್ ಕಳಪೆ ಪ್ರದರ್ಶನದಿಂದಾಗಿ ಲಂಕಾ ಸರಣಿಯಿಂದ ಆಡದಿರುವ ಸಾಧ್ಯತೆ ಇದೆ. ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಶ್ರೀಲಂಕಾ ತಂಡ ಟೀಮ್ ಇಂಡಿಯಾ, ಪಾಕಿಸ್ತಾನ ತಂಡವನ್ನು ಸೋಲಿಸಿ ಏಷ್ಯಾಕಪ್ ಚಾಂಪಿಯನ್ನಾಗಿ ಹೊರಹೊಮ್ಮಿತ್ತು.
ಹಳೆ ಸಮಿತಿಯಿಂದ ತಂಡ ಆಯ್ಕೆ
ತವರಿನಲ್ಲಿ ಶ್ರೀಲಂಕಾ ವಿರುದ್ಧದ ಸರಣಿಗೆ ಹೊರಹೋಗಲಿರುವ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ತಂಡವನ್ನು ಆಯ್ಕೆ ಮಾಡಲಿದೆ. ಮುಂದಿನ ವಾರದವರೆಗೂ ಹೊಸ ಆಯ್ಕೆ ಸಮಿತಿಯನ್ನು ಬಿಸಿಸಿಐ ಆಯ್ಕೆ ಮಾಡುವುದಿಲ್ಲ ಎಂದು ತಿಳಿದು ಬಂದಿದೆ.
ಡಿ.26 ಮತ್ತು ಡಿ.28ರವರೆಗೆ ಕ್ರಿಕೆಟ್ ಸಲಹಾ ಸಮಿತಿ ಆಯ್ಕೆ ಮಂಡಳಿಗೆ ಸಂದರ್ಶನ ನಡೆಸಲಿದೆ ಎಂದು ತಿಳಿದು ಬಂದಿದೆ. ಆಯ್ಕೆ ಸಮಿತಿಗೆ ಕೇಂದ್ರ ವಲಯದಿಂದ ಚೇತನ್ ಮತ್ತು ಹರ್ವಿಂಧರ್ ಸಿಂಗ್ ಮರು ಅರ್ಜಿ ಹಾಕಿದ್ದಾರೆ. ಕನ್ನಡಿಗ ವೆಂಕಟೇಶ್ ಪ್ರಸಾದ್, ನಯನ್ ಮೊಂಗಿಯಾ, ಮಣಿಂದರ್ ಸಿಂಗ್, ಅತುಲ್ ವಾಸನ್, ನಿಕಿಲ್ ಚೋಪ್ರಾ, ಅಮಯ್ ಖುರೇಷಿಯಾ, ಜ್ಞಾನೇಂದ್ರ ಪಾಂಡೆ ಮತ್ತು ಮುಕುಂದ್ ಪಾರ್ಮರ್ ಅರ್ಜಿ ಸಲ್ಲಿಸಿದ್ದಾರೆ.