Hardik | ಟೀಂ ಇಂಡಿಯಾದ ನಾಲ್ಕನೇ ಸ್ಥಾನಕ್ಕೆ ಹಾರ್ದಿಕ್ ಸೂಕ್ತ
ಐಪಿಎಲ್ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಗಾಗಿ ತಯಾರಿ ನಡೆಸಬೇಕಾಗಿದೆ.
ಆದ್ರೆ ಟೀಂ ಇಂಡಿಯಾದಲ್ಲಿ ನಾಲ್ಕನೇ ಸ್ಥಾನದಲ್ಲಿ ಯಾರು ಆಡಬೇಕು ಎಂಬ ಪ್ರಶ್ನೆ ಮುನ್ನಲೆಗೆ ಬರುತ್ತಲೇ ಇದೆ.
ಈ ಸ್ಥಾನದಲ್ಲಿ ಸಾಕಷ್ಟು ಮಂದಿ ಆಟಗಾರರನ್ನೂ ಟ್ರೈ ಮಾಡಿದ್ರೂ ಯಾರೂ ಕೂಡ ಸ್ಥಿರವಾಟ ಆಡಿಲ್ಲ.
ಹೀಗಾಗಿ ಈ ಸ್ಥಾನದಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯವನ್ನು ಕಣಕ್ಕಿಳಸಬೇಕು ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ 15 ನೇ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್, ಬೌಲಿಂಗ್ ನಲ್ಲಿ ಮಿಂಚಿನ ಪ್ರದರ್ಶನ ನೀಡುತ್ತಿದ್ದಾರೆ.
ಅವರ ಈ ಪ್ರದರ್ಶನದ ಬಗ್ಗೆ ಮಾತನಾಡಿರುವ ಇರ್ಫಾನ್ ಪಠಾಣ್, “ಇದು ಹಾರ್ದಿಕ್ ಅವರ ಉತ್ತಮ ಆವೃತ್ತಿಯಾಗಿದೆ.
ಈ ಋತುವಿನಲ್ಲಿ ಅವರು ಆಡಿದ ಪರಿಸ್ಥಿತಿಗಳನ್ನು ನೋಡುವುದು ಒಳ್ಳೆಯದು. ಹಾರ್ದಿಕ್ ಅವರ ಉತ್ತಮ ವಿಷಯವೆಂದರೆ ಅವರು ನಂ. 4 ರಲ್ಲಿ ಬ್ಯಾಟ್ ಮಾಡಿದ್ದಾರೆ.
ಅಲ್ಲದೆ ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಅಲ್ಲದೆ ಪರಿಸ್ಥಿತಿಗೆ ತಕ್ಕನಾದ ಆಟವಾಡು ಕ್ಷಮತೆ ಹೊಂದಿದ್ದಾರೆ.
ಅವರು ಕೆಟ್ಟ ಎಸೆತಗಳಲ್ಲಿ ದೊಡ್ಡ ಹೊಡೆತಗಳನ್ನು ಹೊಡೆಯಲು ಹಿಂಜರಿಯುವುದಿಲ್ಲ. .
ಟೀಮ್ ಇಂಡಿಯಾದ ನಾಲ್ಕನೇ ಕ್ರಮಾಂಕವನ್ನು ಹಾರ್ದಿಕ್ ಪಾಂಡ್ಯ ತುಂಬಲ್ಲರು. ಅವರು ಜವಾಬ್ದಾರಿಯನ್ನು ತೆಗೆದುಕೊಂಡು ಆಡುತ್ತಾರೆ” ಎಂದು ಇರ್ಫಾನ್ ತಿಳಿಸಿದ್ದಾರೆ.
ಐಪಿಎಲ್ ಗೂ ಮುನ್ನಾ ಹಾರ್ದಿಕ್ ಪಾಂಡ್ಯ ಬ್ಯಾಡ್ ಫಾರ್ಮ್ ನಿಂದ ಟೀಂ ಇಂಡಿಯಾದಿಂದ ಕಿಕ್ ಔಟ್ ಆಗಿದ್ದರು.
ಜೊತೆಗೆ ಇಂಜೂರಿ ಸಮಸ್ಯೆ ಕೂಡ ಅವರನ್ನ ಕಾಡಿತ್ತು. ಇದೇ ಕಾರಣಕ್ಕೆ ಮುಂಬೈ ಇಂಡಿಯನ್ಸ್ ತಂಡ ಕೂಡ ರಿಟೈನ್ಡ್ ಮಾಡಿಕೊಳ್ಳಲಿಲ್ಲ.
ಆದ್ರೆ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಹಾರ್ದಿಕ್ ಗೆ ಮಣೆ ಹಾಕಿ ತಂಡದ ನಾಯಕತ್ವ ಜವಾಬ್ದಾರಿ ವಹಿಸಿತು. ಅದಕ್ಕೆ ತಕ್ಕಂತೆ ಹಾರ್ದಿಕ್ ಪ್ರದರ್ಶನ ನೀಡುತ್ತಿದ್ದಾರೆ. Hardik suits Team India’s fourth spot irfan said