Harshal patel | ಮುಂದಿನ ಪಂದ್ಯಗಳಲ್ಲಿ ನನ್ನ ತಾಕತ್ತು ತೋರಿಸುವೆ
ಪುಣೆಯಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಗೆಲುವು ಸಾಧಿಸಿದೆ.
ಆರ್ ಸಿಬಿ ತಂಡದ ವೇಗಿ ಹರ್ಷಲ್ ಪಟೇಲ್ ಮೂರು ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಈ ಪಂದ್ಯದಲ್ಲಿ ಹರ್ಷಲ್ ಪಟೇಲ್ ತಮ್ಮ ನಾಲ್ಕು ಓವರ್ ಕೋಟಾದಲ್ಲಿ 35 ರನ್ ನೀಡಿ ಮೂರು ವಿಕೆಟ್ ಪಡೆದರು.
ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಹರ್ಷಲ್ ಪಟೇಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಆದರೆ, ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದ್ರೂ ಹರ್ಷಲ್ ಪಟೇಲ್ ಗೆ ತಮ್ಮ ಪ್ರದರ್ಶನದ ಬಗ್ಗೆ ತೃಪ್ತಿಯಾಗಿಲ್ಲ.
ಹರ್ಷಲ್ ಅವರು ತಮ್ಮ ಸ್ಪೆಲ್ನ ಮೊದಲ ಮೂರು ಓವರ್ಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದರು.
ಆದ್ರೆ ಅಂತಿಮ ಓವರ್ನಲ್ಲಿ 17 ರನ್ ನೀಡಿ ನಿರ್ಣಾಯಕ ಡ್ವೇನ್ ಪ್ರಿಟೋರಿಯಸ್ ವಿಕೆಟ್ ಪಡೆದರು.
ಪಂದ್ಯದ ಬಳಿಕ ಮಾತನಾಡಿದ ಹರ್ಷಲ್ ಪಟೇಲ್, “ನಾನು ನನ್ನ ಮೊದಲ ಓವರ್ನಲ್ಲಿ ನಿಧಾನಗತಿಯ ಎಸೆತಗಳನ್ನು ಬೌಲ್ ಮಾಡಲು ಪ್ರಯತ್ನಿಸಿದೆ.
ಆದರೆ ಪಿಚ್ ಬ್ಯಾಟರ್ಗಳಿಗೆ ಅನುಕೂಲಕರವಾಗಿತ್ತು. ಹಾಗಾಗಿ ನನ್ನ ಬೌಲಿಂಗ್ನಲ್ಲಿ ಬದಲಾವಣೆ ಮಾಡಿಕೊಂಡೆ. ಎಡಗೈ ಬ್ಯಾಟರ್ ಗಳಿಗೆ ವೈಡ್ ಆಫ್ಸೈಡ್ ಬೌಲ್ ಮಾಡಿದೆ.
ಏಕೆಂದರೆ ಆಫ್ಸೈಡ್ ಬೌಂಡರಿಗಳು ಸ್ವಲ್ಪ ದೊಡ್ಡದಾಗಿರುತ್ತವೆ. ಬ್ಯಾಟ್ಸ್ಮನ್ಗಳು ಸ್ಲೋ ಬಾಲ್ಗಳನ್ನು ಆಡಲು ಎದುರು ನೋಡುತ್ತಿರುವಾಗ.. ನಾನು ಈ ಹಿಂದೆ ಯಾರ್ಕರ್ ಗಳನ್ನು ಹಾಕುತ್ತಿದೆ.
ಆದ್ರೆ ಈ ಸೀಸನ್ ನಲ್ಲಿ ಯಾರ್ಕರ್ ಗಳನ್ನು ಹಾಕಲು ಆಗುತ್ತಿಲ್ಲ. ಆದ್ರೆ ಮುಂದಿನ ಪಂದ್ಯಗಳಲ್ಲಿ ಯಾರ್ಕರ್ ಗಳನ್ನು ಹಾಕಲು ಪ್ರಯತ್ನಿಸುತ್ತೇನೆ ಎಂದು ಹರ್ಷಲ್ ಹೇಳಿದರು.
harshal-patel-says i-have-not-been-able-bowl-yorkers