ಹೇಗೆ ಶುರುವಾಯ್ತು.. ಹೇಗೆ ಮುಂದುವರೆಯುತ್ತಿದೆ.. ಹರ್ಷಲ್ ಫೋಟೋ
ಲೇಟ್ ಆಗಾದ್ರೂ ಲೇಟೆಸ್ಟ್ ಆಗಿ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟಿರುವ ಹರ್ಷಲ್ ಪಟೇಲ್ ತಮ್ಮ ಮೊದಲ ಪಂದ್ಯದಲ್ಲೇ ಎಲ್ಲರ ಗಮನ ಸೆಳೆದಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಮ್ಯಾಚ್ ನಲ್ಲಿ ಹರ್ಷಲ್ ಪಟೇಲ್, ನಾಲ್ಕು ಓವರ್ ಬೌಲ್ ಮಾಡಿ ಕೇವಲ 25 ರನ್ ನೀಡಿ ಎರಡು ವಿಕೆಟ್ ಪಡೆದರು.
30 ವರ್ಷದ 361 ದಿನಗಳ ಹರ್ಷಲ್ ಪಟೇಲ್, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಳ್ಳುವ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ದ್ರಾವಿಡ್ ಜೊತೆಗಿನ ಹಳೆಯ ಮತ್ತು ಹೊಸ ಫೋಟೋಗಳನ್ನು ಅವರು ಶೇರ್ ಮಾಡಿ “ಇದು ಹೇಗೆ ಪ್ರಾರಂಭವಾಯಿತು.. ಹೇಗೆ ಮುಂದುವರೆಯುತ್ತದೆ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ಈ ಫೋಟೋಗೆ ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ಫೋಟೋದಲ್ಲಿ ಬದಲವಣೆ ಇಲ್ಲ. ನಿಮ್ಮ ಗುರಿಯನ್ನು ನೀವು ತಲುಪಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಐಪಿಎಲ್‍ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿರುವ ಹರ್ಷಲ್ ಪಟೇಲ್ 2021 ರ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅವರು 15 ಪಂದ್ಯಗಳನ್ನಾಡಿ 32 ವಿಕೆಟ್ಗಳನ್ನು ಪಡೆದ್ದಾರೆ.