RCB ತಂಡದ ಸ್ಟಾರ್ ಆಟಗಾರನ ಸಹೋದರಿ ನಿಧನ

1 min read
Harshal Patel Saaksha Tv

RCB ತಂಡದ ಸ್ಟಾರ್ ಆಟಗಾರನ ಸಹೋದರಿ ನಿಧನ

RCB ತಂಡದ ಸ್ಟಾರ್ ಬಾಲರ್ ಹರ್ಷಲ್ ಪಟೇಲ್ ಗೆ ಆಘಾತ. ಮುಂಬೈ ವಿರುದ್ಧದ ಪಂದ್ಯದಲ್ಲಿ ಮೊನಚಾದ ಬೌಲಿಂಗ್ ನಡೆಸಿದ ಸ್ಟಾರ್ ಆಟಗಾರ ಹರ್ಷಲ್ ಪಟೇಲ್ ರ ಸಹೋದರಿ ಅರ್ಚಿತಾ ಪಟೇಲ್ ಸಾವನ್ನಪ್ಪಿದ ಸುದ್ದಿ ಬಂದಿದೆ. ಹೀಗಾಗಿ ವೇಗದ ಬೌಲರ್ ಒಂದು ದಿನದ ಮಟ್ಟಿಗೆ ತವರಿಗೆ ಮರಳಿದ್ದಾರೆ.

ಬಹು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅರ್ಚಿತಾ ಪಟೇಲ್ ಸಾವನ್ನಪ್ಪಿರುವ ಸುದ್ದಿ ಹರ್ಷಲ್ ಗೆ ನೋವುಂಟು ಮಾಡಿದೆ. ಹೀಗಾಗಿ ಪಂದ್ಯ ಮುಗಿದ ಬಳಿಕ ಹರ್ಷಲ್ ತವರಿಗೆ ಮರಳಿದ್ದಾರೆ.

ಶನಿವಾರ ನಡೆದ ಡಬಲ್ ಹೆಡರ್ ಪಂದ್ಯದಲ್ಲಿ, ಬೆಂಗಳೂರು ತಂಡ ಅಮೋಘ ಪ್ರದರ್ಶನ ನೀಡಿ ಮುಂಬೈ ಇಂಡಿಯನ್ಸ್ ಗೆ ಸೋಲು ಉಣಿಸಿತ್ತು. ಈ ಪಂದ್ಯದಲ್ಲಿ ಬೆಂಗಳೂರು ಸಂಘಟಿತ ಆಟದ ಪ್ರದರ್ಶನವನ್ನು ನೀಡಿ ಗಮನ ಸೆಳೆಯಿತು. ಮೊದಲು ಬೌಲಿಂಗ್ ನಲ್ಲಿ ಸ್ಥಿರ ಪ್ರದರ್ಶನ ನೀಡಿತು. ನಂತರ ತನ್ನ ಘನತೆಗೆ ತಕ್ಕ ಆಟವಾಡಿತು. ಈ ಪಂದ್ಯ ವೇಳೆ ವಿರಾಟ್ ಕೊಹ್ಲಿ ಲಯಕ್ಕೆ ಮರಳಿರುವುದು ತಂಡಕ್ಕೆ ಬೂಸ್ಟ್ ನೀಡಿದೆ.

ಹರ್ಷಲ್ ಪಟೇಲ್ ಕಳೆದ ಆವೃತ್ತಿಯಲ್ಲಿ ಪರ್ಪಲ್ ಕ್ಯಾಪ್ ಪಡೆದಿದ್ದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd