Hassan mixi Blast : ಹಾಸನದ ಕೊರಿಯರ್ ಕಚೇರಿಯಲ್ಲಿ ಮಿಕ್ಸಿ ಸ್ಪೋಟ
ಹಾಸನ : ಹಾಸನದ ಕುವೆಂಪು ನಗರದ ಕೊರಿಯರ್ ಕಚೇರಿಗೆ ಬಂದ ಪಾರ್ಸೆಲ್ ನಲ್ಲಿ ಇದ್ದ ಮಿಕ್ಸಿ ಸ್ಪೋಟಗೊಂಡಿದೆ… ಕುಕ್ಕರ್ ಬ್ಲಾಸ್ಟ್ ಪ್ರಕರಣದ ನಂತರ ಸದ್ಯಕ್ಕೆ ರಾಜ್ಯದಲ್ಲಿ ಮಿಕ್ಸಿ ಸ್ಪೋಟ ಜನರನ್ನ ಆತಂಕಕ್ಕೀಡು ಮಾಡಿದೆ..
ಡಿಟಿಡಿಸಿ ಕೊರಿಯರ್ ಕಚೇರಿಯಲ್ಲಿ ಡಿಸೆಂಬರ್ 26 ಸಂಜೆ 8-30 ರ ಸಮಯದಲ್ಲಿ ಸ್ಪೋಟ ಸಂಭವಿಸಿದೆ. ಕೊರಿಯರ್ ಅಂಗಡಿ ಮಾಲೀಕ ಶಶಿ ಅವರಿಗೆ ಮಿಕ್ಸಿಯಲ್ಲಿದ್ದ ಬ್ಲೇಡ್ ಗಳು ಎದೆ, ಸೊಂಟ ಮತ್ತು ಕೈ ಭಾಗಗಳಿಗೆ ತಗಲಿ ಗಾಯಗಳಾಗಿವೆ. ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಹರಿರಾಮ್ ಶಂಕರ್ ಘಟನೆಯ ಬಗ್ಗೆ ಪರಿಶೀಲನೆ ನಡೆಸಿದರು.
ಘಟನೆಯ ಬಗ್ಗೆ ಯಾವುದೇ ಉಹಾಪೋಹಗಳಿಗೆ ಕಿವಿ ಕೊಡಬಾರದು ಎಂದು ಮನವಿ ಮಾಡಿದ್ದಾರೆ.. ಘಟನೆ ಕುರಿತು ಹೆಚ್ಚುವರಿ ತನಿಖೆಗೆ ಮೈಸೂರಿನಿಂದ ವಿಧಿ ವಿಜ್ಞಾನ ತಜ್ಞರು ಅಗಮಿಸಿದ್ದಾರೆ..