Haveri | ರಕ್ಕಸ ಮಳೆಗೆ ಯುವಕ ಕೊನೆಯುಸಿರು
ಹಾವೇರಿ : ಜಿಲ್ಲೆಯಲ್ಲಿ ಸುರಿದ ರಕ್ಕಸ ಮಳೆಗೆ ಯುವಕ ಕೊನೆಯುಸಿರೆಳೆದಿದ್ದಾನೆ.
32 ವರ್ಷದ ಬಸವನಗೌಡ ಶಿವನಗೌಡ ಪಾಟೀಲ್ ಮೃತ ದುರ್ದೈವಿಯಾಗಿದ್ದಾರೆ.
ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಶಿಗ್ಗಾವಿ ತಾಲೂಕು ಶಿಶುವಿನಹಾಳ ಗ್ರಾಮದ ಬಸನಗೌಡ ಮನೆ ಕುಸಿತಗೊಂಡಿದೆ.
ಅದೃಷ್ಟವಶಾತ್ ಬಸನಗೌಡ ತಂದೆ – ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳೀಯರ ಸಹಾಯದಿಂದ ಮೃತ ಬಸನಗೌಡ ತಂದೆ ಶಿವನಗೌಡ ಹಾಗೂ ತಾಯಿ ಕಾಶೆವ್ವ ಅವರನ್ನು ರಕ್ಷಣೆ ಮಾಡಲಾಗಿದೆ.
ನಿನ್ನೆ ರಾತ್ರಿ ಮನೆ ಕುಸಿದು ಬಿದ್ದಿದೆ. ಮನೆಯೊಳಗೆ ಪಡಸಾಲೆಯಲ್ಲಿದ್ದ ಬಸನಗೌಡ ಮನೆ ಗೋಡೆ ಬಿದ್ದ ಪರಿಣಾಮ ತೀವ್ರ ಗಾಯಗೊಂಡಿದ್ದಾರೆ.
ಈ ವೇಳೆ ಸ್ಥಳೀಯರು ಬಸನಗೌಡ ಅವರನ್ನು ಶಿಗ್ಗಾವಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಗೆ ಕರೆದೊಯ್ಯುವ ಸಂದರ್ಭದಲ್ಲಿ ಬಸನಗೌಡ ಮೃತ ಪಟ್ಟಿದ್ದಾರೆ.