ರುಚಿ ಮತ್ತು ವಾಸನೆಯನ್ನು ಗುರುತಿಸಲು ಸಮಸ್ಯೆಯಾಗುತ್ತಿದೆಯೇ? ಹಾಗಿದ್ದರೆ ಈ ರೀತಿ ಮಾಡಿ

1 min read
trouble smelling

ರುಚಿ ಮತ್ತು ವಾಸನೆಯನ್ನು ಗುರುತಿಸಲು ಸಮಸ್ಯೆಯಾಗುತ್ತಿದೆಯೇ? ಹಾಗಿದ್ದರೆ ಈ ರೀತಿ ಮಾಡಿ

ಕೊರೋನದ ರೋಗಲಕ್ಷಣಗಳಲ್ಲಿ ರುಚಿ ಮತ್ತು ವಾಸನೆಯನ್ನು ಗುರುತಿಸಲು ಆಗದಿರುವುದು ಮುಖ್ಯ ಲಕ್ಷಣಗಳೆಂದು ಪರಿಗಣಿಸಲಾಗುತ್ತದೆ. ಆದರೆ ತಜ್ಞರ ಪ್ರಕಾರ, ಈ ಎರಡೂ ಲಕ್ಷಣಗಳು ಜ್ವರದಲ್ಲಿಯೂ ಕಂಡುಬರುತ್ತವೆ. ಆದರೆ ನಿಮಗೆ ರುಚಿ ಅಥವಾ ವಾಸನೆಯನ್ನು ಗುರುತಿಸುವಲ್ಲಿ ಸಮಸ್ಯೆಯಾಗುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ ಅಥವಾ ಭಯಪಡಬೇಡಿ. ಈ ಸಮಸ್ಯೆಯನ್ನು ನಿವಾರಿಸಬಲ್ಲ ಕೆಲವು ಮನೆಮದ್ದುಗಳು ಇಲ್ಲಿವೆ.
Saakshatv healthtips Raw Garlic

1 ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿ ಆಂಟಿವೈರಸ್ ತರಹದ ಗುಣಗಳಿವೆ. ಆಯುರ್ವೇದದ ಪ್ರಕಾರ, ಬೆಳ್ಳುಳ್ಳಿಯಲ್ಲಿರುವ ಪದಾರ್ಥಗಳು ಮೂಗಿನಲ್ಲಿನ ಊತದ ಸಮಸ್ಯೆಯನ್ನು ನಿವಾರಿಸುತ್ತದೆ. ಇದಕ್ಕಾಗಿ ನೀವು ಬೆಳ್ಳುಳ್ಳಿಯನ್ನು ನೀರಿನಲ್ಲಿ ಸೇರಿಸಿ ಬಿಸಿ ಮಾಡಿ ಸೇವಿಸಬಹುದು. ನೀವು ಇದಕ್ಕೆ ನಿಂಬೆ ರಸವನ್ನು ಮತ್ತು ಅರಿಶಿನವನ್ನು‌ ಸೇರಿಸಬಹುದು. ಇದನ್ನು ಸೇವಿಸುವುದರಿಂದ ನಿಮ್ಮ ರುಚಿ ಮತ್ತು ವಾಸನೆ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸಬಹುದು.

2 ಕೊತ್ತಂಬರಿ ಸೊಪ್ಪು: ಆಯುರ್ವೇದದಲ್ಲಿ, ಕೊತ್ತಂಬರಿ ಸೊಪ್ಪನ್ನು ಶೀತವನ್ನು ನಿವಾರಿಸಲು ಔಷಧಿಯಾಗಿ ಬಳಸಲಾಗುತ್ತದೆ. ಇದು ವಾಸನೆ ಗುರುತಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕೊತ್ತಂಬರಿ ಸೊಪ್ಪನ್ನು ಕರವಸ್ತ್ರದಲ್ಲಿ ಇರಿಸಿ ಮತ್ತು ಆಳವಾದ ಉಸಿರನ್ನು ತೆಗೆದುಕೊಳ್ಳುತ್ತಾ ಅದನ್ನು ಉಸಿರಾಡಲು ಪ್ರಯತ್ನಿಸಿ.
Saakshatv healthtips Coriander
3 ಹರಳೆಣ್ಣೆ: ಸೈನುಟಿಸ್ ನ ನೋವು ಮತ್ತು ಅಲರ್ಜಿಗೆ ಹರಳೆಣ್ಣೆ ತುಂಬಾ ಪ್ರಯೋಜನಕಾರಿಯಾಗಿದೆ. ಆದ್ದರಿಂದ ಹರಳೆಣ್ಣೆ ಅನ್ನು ಸ್ವಲ್ಪ ಬೆಚ್ಚಗಾಗಿಸಿ ಮತ್ತು ಅದರ ಒಂದು ಹನಿಯನ್ನು ಮೂಗಿಗೆ ಹಾಕಿ. ಇದನ್ನು ಬೆಳಿಗ್ಗೆ ಮತ್ತು ರಾತ್ರಿಯಲ್ಲಿ ಮಲಗುವ ಸಮಯದಲ್ಲಿ ಬಳಸಿ. ಅದು ನಿಮ್ಮ ಮುಚ್ಚಿದ ಮೂಗು ತೆರೆಯುತ್ತದೆ ಮತ್ತು ವಾಸನೆ ಗುರುತಿಸಲು ನೆರವಾಗುತ್ತದೆ.

#trouble #smelling #taste

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd