2023ರಲ್ಲಿ ಸ್ವತಂತ್ರವಾಗಿ ಜೆಡಿಎಸ್ ಅಧಿಕಾರಕ್ಕೆ : ಹೆಚ್ ಡಿಡಿ
ಬೆಂಗಳೂರು : ನನಗೆ ನಮ್ಮ ಪಕ್ಷ ಕಟ್ಟುವುದು ಮುಖ್ಯ. 2023 ರಲ್ಲಿ ನಮ್ಮ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕು ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ನಗರದ ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಹೆಚ್ ಡಿ ದೇವೇಗೌಡರು, ನಮ್ಮ ಸರ್ಕಾರ ಬಿದ್ದ ಮೇಲೆ ಯಡಿಯೂರಪ್ಪನವರ ಸರ್ಕಾರವನ್ನೂ ನಾವು ಬೀಳಿಸುತ್ತೇವೆ ಎಂದು ನಾನು ಹೇಳಲ್ಲ.
ನನಗೆ ನಮ್ಮ ಪಕ್ಷ ಕಟ್ಟುವುದು ಮುಖ್ಯವಾಗಿದೆ. 2023ರಲ್ಲಿ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕು.ಬಿಜೆಪಿ ಸರ್ಕಾರದ ಬಗ್ಗೆ ಚರ್ಚೆ ಅನಗತ್ಯ.
ಅದರ ಬಗ್ಗೆ ಮಾತನ್ನಾಡಲು ಹಲವರಿದ್ದಾರೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು.
ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಪೆಟ್ರೋಲ್-ಡೀಸೆಲ್ ಬೆಲೆ
ಅಲ್ಲದೆ ನಮಗೆ ಮುಂದಿನ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಮುಖ್ಯ. ಅದರ ಕಡೆ ಹೆಚ್ಚು ಗಮನ ಕೊಡೋಣ ಎಂದು ಕಾರ್ಯಕರ್ತರಿಗೆ ಕರೆಕೊಟ್ಟರು.
ಇನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಮ್ಮ ಕಾರ್ಯಕರ್ತರಿದ್ದಾರೆ. ನಾವು ಕೆಲವು ಕಡೆ ಮೂರನೇ ಸ್ಥಾನ ಇರಬಹುದು. ಆದ್ರೆ ಹಲವೆಡೆ ಮೊದಲನೇ ಸ್ಥಾನದಲ್ಲೇ ಇದ್ದೇವೆ ಎಂದು ದೇವೇಗೌಡರು ಹೇಳಿದರು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









