ಹೆಚ್ಚಿನ ಮೌಲ್ಯದ ವಾಚ್ ಗಾಗಿ ಯುವಕನನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿ (Hubballi)ಯ ಬೆಂಗೇರಿಯಲ್ಲಿ ನಡೆದಿದೆ.
ನಗರದ ಮನೋಜ್ ಪಾರ್ಕ್ ನಿವಾಸಿ ಅಸ್ಲಂ ಮಕಂದರ್ (30) ಹತ್ಯೆಯಾಗಿರುವ ವ್ಯಕ್ತಿ ಎನ್ನಲಾಗಿದೆ. ಮಂಜುನಾಥ್ ಜೋನಲ್ಲಿ ಎಂಬ ವ್ಯಕ್ತಿಯೇ ಹಲ್ಲೆ ನಡೆಸಿ, ಎದೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಚಾಕು ಇರಿತದಿಂದಾಗಿ ಅಸ್ಲಂ ಸಾವನ್ನಪ್ಪಿದ್ದಾನೆ. ಆತನ ಶವವನ್ನು ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.
ಕೊಲೆಯಾದ ಕೆಲವೇ ಹೊತ್ತಿನಲ್ಲಿ ಆರೋಪಿ ಮಂಜುನಾಥನ ಬಂಧನವಾಗಿದ್ದು, ಮೃತ ಅಸ್ಲಾಂ ಮೃತದೇಹ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರ ಭೇಟಿ ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ








