ಮೈಸೂರು: ಏಪ್ರಿಲ್ 5ರಂದು ಎಲ್ಲಾ ಮನೆಗಳಲ್ಲೂ ರಾತ್ರಿ 9ಕ್ಕೆ 9 ನಿಮಿಷಗಳ ಕಾಲ ವಿದ್ಯುತ್ ದೀಪಗಳನ್ನ ಆರಿಸಿ, ಹಣತೆ, ಮೇಣದ ದೀಪಗಳನ್ನ ಬೆಳಗುವಂತೆ ಇಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆಕೊಟ್ಟಿದ್ದಾರೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಇದೀಗ ಈ ವಿಚಾರದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮನೆಗಳಲ್ಲಿ ದೀಪ ಬೆಳಗಿಸುವುದರಿಂದ ಖಾಯಿಲೆ ವಾಸಿಯಾಗುತ್ತಾ ಎಂದು ಮೋದಿ ಅವರನ್ನು ಪ್ರಶ್ನಿಸಿದ್ದಾರೆ. ಒಂದು ವೇಳೆ ದೀಪ ಬೆಳಗಿಸುವುದರಿಂದ ಖಾಯಿಲೆ ವಾಸಿಯಾಗೋದಾದ್ರೆ ಮಾಡಲಿ. ನಮ್ಮದೇನೂ ಅಭ್ಯಂತರವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.








