ಬೇಕಾಗುವ ಪದಾರ್ಥಗಳು
ಬಾದಾಮಿ- 1 ತಟ್ಟೆ
ಓಟ್ಸ್- 1 ತಟ್ಟೆ
ಕಡಲೆಕಾಯಿ ಬೀಜ- 1 ತಟ್ಟೆ
ಮಖಾನಾ- 1 ತಟ್ಟೆ
ಕುಂಬಳಕಾಯಿ ಬೀಜ- 1 ತಟ್ಟೆ
ಗೋಡಂಬಿ- ಸ್ವಲ್ಪಮಟ್ಟಿಗೆ
ಕೋಕೋ ಪೌಡರ್ – 2 ರಿಂದ 4 ಚಮಚ
ಮಾಡುವ ವಿಧಾನ
ಒಲೆಯ ಮೇಲೆ ಬಾಣಲೆ ಇಟ್ಟು ಕೋಕೋ ಪೌಡರ್ ಒಂದನ್ನು ಬಿಟ್ಟು ಮೇಲಿನ ಎಲ್ಲಾ ಪದಾರ್ಥಗಳನ್ನೂ ಒಂದರ ನಂತರ ಒಂದು ಪ್ರತ್ಯೇಕವಾಗಿ ಸಣ್ಣ ಉರಿಯಲ್ಲಿ ಕೆಂಪಗೆ ಹುರಿದಿಟ್ಟುಕೊಳ್ಳಿ.
ಹುರಿದ ಪದಾರ್ಥಗಳು ತಣ್ಣಗಾದ ಬಳಿಕ ಮಿಕ್ಸಿ ಜಾರ್’ಗೆ ಹಾಕಿ ಪುಡಿ ಮಾಡಿ. ಈ ಪುಡಿಗೆ ಕೋಕೋ ಪೌಡರ್ ಹಾಕಿ ಮಿಶ್ರಣ ಮಾಡಿ. ಗಾಳಿಯಾಡದ ಡಬ್ಬಿಗೆ ಹಾಕಿಟ್ಟುಕೊಳ್ಳಿರಿ.
ಮಕ್ಕಳಿಗೆ ಕೊಡುವಾಗ ಸಮಯದಲ್ಲಿ ಬಿಸಿ ಹಾಲಿಗೆ 1 ಚಮಚ ಬೆಲ್ಲದ ಪುಡಿ ಅಥವಾ ಕಲ್ಲು ಸಕ್ಕರೆ ಹಾಗೂ ಈಗಾಗಲೇ ಮಾಡಿಟ್ಟುಕೊಂಡ ಹೆಲ್ತ್ ಡ್ರಿಂಕ್ ಪೌಡರ್ ನ್ನು ಒಂದು ಚಮಚ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕೊಡಿ.
ಈ ಹೆಲ್ತ್ ಡ್ರಿಂಕ್ಸ್ ಮಕ್ಕಳ ತೂಕವನ್ನು ಹೆಚ್ಚಿಸುವುದಲ್ಲದೆ, ಮೂಳೆ ಬಲಪಡಿಸಲು ಹಾಗೂ ಆರೋಗ್ಯವೂ ಉತ್ತಮವಾಗಿರಲು ಸಹಾಯ ಮಾಡುತ್ತದೆ.