ಮ್ಯೂಕಸ್ ಮೈಕ್ರೋಸಿಸ್ (ಬ್ಲಾಕ್ ಫಂಗಸ್) ಸೊಂಕು ತಡೆಗೆ ಮುಂಜಾಗೃತ ಕ್ರಮ – ಆರೋಗ್ಯ ಸಚಿವ ಡಾ.ಕೆ.ಸುಧಾಕರ್

1 min read

ಮ್ಯೂಕಸ್ ಮೈಕ್ರೋಸಿಸ್ (ಬ್ಲಾಕ್ ಫಂಗಸ್) ಸೊಂಕು ತಡೆಗೆ ಮುಂಜಾಗೃತ ಕ್ರಮ – ಆರೋಗ್ಯ ಸಚಿವ ಡಾ.ಕೆ.ಸುಧಾಕರ್

healh minister dr sudhakar saakshatvಹುಬ್ಬಳ್ಳಿ : ರಾಜ್ಯದಲ್ಲಿ ಮ್ಯೂಕಸ್ ಮೈಕ್ರೋಸಿಸ್ (ಬ್ಲಾಕ್ ಫಂಗಸ್) ಸೊಂಕು ಹೆಚ್ಚಾಗಿ ಹರಡುತ್ತಿದೆ. ಇದರ ಕಾರಣ ತಿಳಿಯಲು ಸರ್ಕಾರದಿಂದ ಮೈಕೋಲಾಜಿಸ್ಟ್ (ಶಿಲೀಂದ್ರ ತಜ್ಞರ) ಸಮಿತಿ ನೇಮಿಸಲಾಗಿದೆ. ತಜ್ಞರ ಸಮಿತಿ ಪ್ರಾಥಮಿಕ ವರದಿಯನ್ನು ನೀಡಿದೆ. ಆಸ್ಪತ್ರೆಗಳಲ್ಲಿ ಬಳಸುವ ಹ್ಯುಮಿಡಿಫೈಡ್‌ಗಳಲ್ಲಿ ಡಿಸ್ಟಿಲ್ ವಾಟರ್‌ ಬಳಸಬೇಕು, ಆದರೆ ಹಲವು ಕಡೆ ನಳದ ನೀರನ್ನು ಹಾಕಿದ್ದಾರೆ. ಇದರಿಂದ ಫಂಗಸ್ ಬೆಳವಣಿಗೆಯಾಗಿದೆ. ಕ್ಯಾನುಲಾಗಳು ಸೇರಿದಂತೆ ಐ.ಸಿ.ಯುನಲ್ಲಿ ಬಳಸುವ ವೈದ್ಯಕೀಯ ಪರಿಕರಗಳಲ್ಲಿ ಕೂಡ ಫಂಗಸ್ ಬೆಳೆಯತ್ತಿದೆ. ಇವುಗಳನ್ನು ಮತ್ತೊಬ್ಬ ರೋಗಿ ಬಳಸುವಾಗ ಸಂಪೂರ್ಣವಾಗಿ ಸ್ಯಾನಿಟೈನ್ ಮಾಡಿ ಬಳಸಬೇಕು. ಇಲ್ಲವಾದರೆ ಹೊಸದನ್ನು ಬಳಸಬೇಕು ಎಂಬ ಸಲಹೆಯನ್ನು ತಜ್ಞರ ಸಮಿತಿ ನೀಡಿದೆ. ತಜ್ಞರ ವರದಿ ಆಧರಿಸಿ ಬ್ಲಾಕ್ ಫಂಗಸ್ ಸೊಂಕು ಹರಡುವುದನ್ನು ತಡೆಯಲು ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಬ್ಲಾಕ್ ಹಾಗೂ ವೈಟ್ ಫಂಗಸ್‌ನಲ್ಲಿ ವರ್ಣದ ಅಂಶ ಹೊರತು ಪಡಸಿದರೆ ಬೇರೆ ವ್ಯತ್ಯಾಸಗಳು ಇಲ್ಲ. ಸ್ಟಿರಾಯ್ಡ್‌ನ ವಿವೇಚನ ರಹಿತ ಬಳಕೆ ದೇಹದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವಂತೆ ಮಾಡುತ್ತದೆ. ಐ.ಸಿ.ಯು.ನಲ್ಲಿ ಆಮ್ಲಜನಕದ ಮೇಲೆ ರೋಗಿಗಳು ಹೆಚ್ಚುಕಾಲ ಇರುವುದರಿಂದ ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಫಂಗಸ್ ಸೋಂಕು ಇವರನ್ನು ತೀವ್ರತರನಾಗಿ ಬಾದಿಸತ್ತಿದೆ. ದೇಶದಲ್ಲಿ 40 ರಿಂದ 50 ಬ್ಲಾಕ್ ಪಂಗಸ್ ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು. ಆದರೆ ಇಂದು ಹಲವು ರಾಜ್ಯಗಳಲ್ಲಿ ಸೊಂಕು ಹೆಚ್ಚಾಗಿ ಹರಡುತ್ತಿದೆ. ಪ್ರಸ್ತುತ ಮಾಹಿತಿ ಪ್ರಕಾರ ರಾಜ್ಯದಲ್ಲಿ 250 ಬ್ಲಾಕ್ ಫಂಗಸ್ ಸೋಂಕಿತರು ಇದ್ದಾರೆ. ‌ಎಲ್ಲಾ ಸೊಂಕಿತರಿಗೂ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ದೇಶದಲ್ಲಿ ಬ್ಲಾಕ್ ಪಂಗಸ್ ಚಿಕಿತ್ಸೆಗೆ ಅಗತ್ಯವಾದ ಔಷದಗಳ 14000 ವೈಲ್ಸ್ ಉತ್ಪಾದನೆಯಾಗುತ್ತಿದೆ. ರಾಜ್ಯಕ್ಕೆ ಅಗತ್ಯವಿರುವಷ್ಟು ವೈಲ್‌ಗಳನ್ನು ಒದಗಿಸುವುದಾಗಿ ಕೇಂದ್ರ ರಾಸಾಯನಿಕ ‌ಹಾಗೂ ರಸಗೊಬ್ಬರ ಖಾತೆ ಸಚಿವರಾದ ಸದಾನಂದಗೌಡ ಅವರು ಆಶ್ವಾಸನೆ ನೀಡಿದ್ದಾರೆ ಎಂದರು. ಪತ್ರಕರ್ತರ ಪಶ್ನೆಗೆ ಉತ್ತರಿಸಿದ ಸಚಿವರು ಎಲ್ಲಾ ವೈದ್ಯಕೀಯ, ಅರೆ ವೈದ್ಯಕೀಯ‌ ಹಾಗೂ ಗ್ರೂಪ್ ಡಿ ನೌಕರರಿಗೂ ತುರ್ತು ಸಂದರ್ಭದ ಭತ್ಯೆಯನ್ನು ನೀಡಲಾಗುತ್ತಿದೆ ತಿಳಿಸಿದರು.

ಈ ಸಂದರ್ಭದಲ್ಲಿ ಕಿಮ್ಸ್‌ನಲ್ಲಿ ಕೋವಿಡ್ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ ವಿಧಿವಿಧಾನ, ಕೈಗೊಳ್ಳಲಾದ ವ್ಯವಸ್ಥೆಗಳು, ಸರ್ಕಾರ ಮಾರ್ಗಸೂಚಿಗಳ ಪಾಲನೆ ಕುರಿತು ಮಾಹಿತಿ ಪಡೆದು, ಪರಿಶೀಲನೆ ನೆಡಿಸಿದರು. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ಕರ್ತವ್ಯದ ರೋಸ್ಟರ್ ಸರಿಯಾಗಿ ನಿಭಾಯಿಸುವಂತೆ ಕಿಮ್ಸ್ ಮುಖ್ಯಸ್ಥರಿಗೆ ತಿಳಿಸಿದರು.ನಂತರ ಕಿಮ್ಸ್ ವೈದ್ಯಾಧಿಕಾರಿಗಳ ಸಭೆ ಜರುಗಿಸಿದರು.

ಶಾಸಕ ಅರವಿಂದ ಬೆಲ್ಲದ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರಠಾಣಿ, ಜಿ.ಪಂ.ಸಿ.ಇ.ಓ ಡಾ.ಬಿ.ಸುಶೀಲಾ, ಕಿಮ್ಸ್ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರು, ವೈದ್ಯಕೀಯ ಅಧೀಕ್ಷಕ ಡಾ.ಅರುಣಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd