Heart Attack : ತೆಂಗಿನ ಮರವೇರಿದ ವ್ಯಕ್ತಿಗೆ ಹೃದಯಾಘಾತ; ಮರದ ಮೇಲೆಯೇ ಸಾವು…
50 ಅಡಿ ಎತ್ತರದ ಮರದಿಂದ ತೆಂಗಿನಕಾಯಿ ಕೀಳುತ್ತಿದ್ದಾಗ ಸುಮಾರು 60 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮರದ ಮೇಲೆಯೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೈಲಸಂದ್ರದ ವಿಜಯಶ್ರೀ ಲೇಔಟ್ನಲ್ಲಿರುವ ವೆಂಕಟರಮಣ ದೇವಸ್ಥಾನದ ಬಳಿ ಸೋಮವಾರ ಬೆಳಗ್ಗೆ 7.30ರ ಸುಮಾರಿಗೆ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನ ಮೈಲಸಂದ್ರ ನಿವಾಸಿ ನಾರಾಯಣಪ್ಪ ಎಂದು ಗುರುತಿಸಲಾಗಿದೆ.
ಸೋಮವಾರ ತೆಂಗಿನ ಮರ ಹತ್ತಿ ಕಾಯಿ ಕೀಳುತ್ತಿದ್ದ ನಾರಾಯಣಪ್ಪ ಎಷ್ಟು ಹೊತ್ತಾದರೂ ಮರದಿಂದ ಕೆಳಗಿಳಿಯದೇ ಸುಮ್ಮನೆ ಕುಳಿತಿರುವುದನ್ನ ಜನ ನೋಡಿದ್ದಾರೆ. ಕೂಗಿದರೂ ಯಾವುದೇ ಪ್ರತಿಕ್ರಿಯೆ ಸಿಗದೇ ಇದ್ದಾಗ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ನಂತರ ಅಗ್ನಿಶಾಮಕ ದಳ ಮತ್ತು ಪೊಲೀಸರು ಕ್ರೇನ್ ಬಳಸಿ ಮರದ ತುದಿಗೆ ತಲುಪಿ ಪರಿಶೀಲಿಸಿದಾಗ ವ್ಯಕ್ತಿ ಸಾವನ್ನಪ್ಪಿರುವುದು ಕಂಡುಬಂದಿದೆ. ಮೃತದೇಹವನ್ನು ಕೆಳಗಿಳಿಸಿ ಖಾಸಗಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ಹೃದಯಾಘಾತವಾಗಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.
Heart Attack : Heart attack in coconut tree person Death on a tree