ಕಾಪು : ವಾಲಿಬಾಲ್ ಅಂಗಳದಲ್ಲೇ ಆಟಗಾರ ಸಾವು
ಕಾಪು : ವಾಲಿಬಾಲ್ ಅಂಗಳದಲ್ಲೇ ಆಟಗಾರ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇನ್ನಂಜೆಯ ಮೈದಾನದಲ್ಲಿ ನಡೆದಿದೆ.
25 ವರ್ಷದ ದೇವು ಅಂಚನ್ ಮೃತ ವಾಲಿಬಾಲ್ ಆಟಗಾರನಾಗಿದ್ದು, ಈತ ರಾಜ್ಯಮಟ್ಟದ ಆಟಗಾರ ಎಂದು ತಿಳಿದು ಬಂದಿದೆ.
ನಿನ್ನೆ ರಾತ್ರಿ ಉಡುಪಿ ಜಿಲ್ಲೆ ಕಾಪು ತಾಲ್ಲೂಕಿನ ಇನ್ನಂಜೆಯ ಮೈದಾನದಲ್ಲಿ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು.
ಇದರಲ್ಲಿ ದೇವು ಅಂಚನ್ ಕೂಡ ಭಾಗವಹಿಸಿದ್ದರು. ವಾಲಿಬಾಲ್ ಪಂದ್ಯಾಟ ಮುಗಿಸಿ ಅಂಗಳದ ಬದಿಯಲ್ಲಿ ವಿಶ್ರಾಂತಿ ಪಡೆಯುವಾಗ ಹೃದಯಾಘಾತ ಸಂಭವಿಸಿದೆ.
ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.
