ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಳೆರಾಯ ವ್ಯಾಪಕವಾಗಿ ಸುರಿಯುತ್ತಿದ್ದಾನೆ.
ಆದರೆ, ಈ ಮಧ್ಯೆ ಜುಲೈ 24ರಂದು ರಾತ್ರಿ ಆಕಾಶದಲ್ಲಿ ನಿಗೂಢ ನೆರಳೊಂದು ಕಾಣಿಸಿಕೊಂಡಿದ್ದು, ಟ್ವಿಟರ್ನಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.
ಟ್ವಿಟರ್ ನಲ್ಲಿ ವ್ಯಕ್ತಿಯೊಬ್ಬರು ಆಕಾಶದಲ್ಲಿ ಬಾಗಿಲಿನಂತೆ ಕಾಣುವ ನಿಗೂಢ ಹೊಳೆಯುವ ಚಿತ್ರದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆನೇಕರು ಇದು ಸ್ವರ್ಗದ ಬಾಗಿಲು ಎಂದು ಕಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಅಚ್ಚರಿ ಹೊರ ಹಾಕಿದ್ದಾರೆ.
ವಸೀಮ್ ಎಂಬ ಟ್ವಿಟರ್ ಬಳಕೆದಾರರೊಬ್ಬರು ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಹೆಬ್ಬಾಳ ಮೇಲ್ಸೇತುವೆ ಬಳಿ ನಿನ್ನೆ ರಾತ್ರಿ ಆಕಾಶದಲ್ಲಿ ನಿಗೂಢ ನೆರಳು ಕಾಣಿಸಿಕೊಂಡಿದೆ. ಬೇರೆ ಯಾರಾದರೂ ನೋಡಿದ್ದೀರಾ? ಇದು ಏನಾಗಿರಬಹುದು? ಕಟ್ಟಡದ ನೆರಳಾ? ಹಾಗಿದ್ದಲ್ಲಿ, ಇದರ ಹಿಂದಿನ ವಿಜ್ಞಾನ ಏನಿರಬಹುದು? ಎಂದು ಅವರು ವಿಡಿಯೋ ಹಂಚಿಕೊಂಡಿದ್ದಾರೆ.
ಈ ವಿಡಿಯೋ ತೀವ್ರ ಚರ್ಚೆಗೆ ಕಾರಣವಾಗಿದೆ. ಕೇವಲರು ಇದು ಯಾವುದೋ ಎತ್ತರದ ಕಟ್ಟಡದ ಲೈಟ್ನ ನೆರಳಿರಬಹುದು ಎಂದು ಊಹಿಸಿದರೆ ಕೆಲವರು ಇದನ್ನು ‘ಬ್ರೋಕನ್ ಸ್ಪೆಕ್ಟರ್’ ಎಂದು ಊಹಿಸಿದ್ದಾರೆ.