ವರುಣನ ರೌದ್ರಾವತಾರ – ಕೆರೆಯಂತಾದ ರಸ್ತೆಗಳು..!
ಮೈಸೂರು : ನಿನ್ನೆ ರಾತ್ರಿ ಇಡೀ ಬೆಂಗಳೂರಿನಲ್ಲಿ ವರುಣನ ರೌದ್ರಾವತಾರವನ್ನ ಜನ ಕಣ್ತುಂಬಿಕೊಂಡಿದ್ದಾರೆ. ಗಾಳಿ ಸಹಿತ ಧಾರಾಕಾರ ಮಳೆಗೆ ಜನರು ಬೆಚ್ಚಿ ಬಿದ್ದಿದ್ದಾರೆ. ಬೆಂಗಳೂರಿನ ಬಹುತೇಕ ಎಲ್ಲಾ ರಸ್ತೆಗಳು ಕರೆಯಂತಾಗಿತ್ತು, ನದಿಗಳಂತೆ ಹರಿಯುತ್ತಿದ್ದ ದೃಶ್ಯಗಳು ಕಂಡುಬಂದ್ವು.. ಬೈಕ್ ಸವಾರರಂತೂ ಮಳೆಯಿಂದ ಪರದಾಡುವಂತಾಗಿತ್ತು.
ಇತ್ತ ಮೈಸೂರಿನಲ್ಲೂ ಇದೇ ಪರಿಸ್ಥಿತಿ ಕಂಡುಬಂದಿದೆ. ಕುವೆಂಪು ನಗರದ ಐಶ್ವರ್ಯ ಲೇಔಟ್ ನ ಆರ್.ಎಂ.ಪಿ ಕ್ವಾಟ್ರಸ್ ಕೂಡ ಮಳೆಯಿಂದಾಗಿ ಕರೆಯಂತಾಗಿದ್ದು, ಬ್ರಿಡ್ಜ್ ಕಾಮಗಾರಿ ಅರೆಬರೆ ಕೆಲಸವಾಗಿರುವುದರಿಂದ ಸಮಸ್ಯೆ ಎದುರಾಗಿತ್ತು. ಮೈಸೂರು ನಗರ ಪಾಲಿಕೆ ಮೇಯರ್ ಪ್ರತಿನಿಧಿಸುವ ವಾರ್ಡ್ನಲ್ಲಿ ಕಳೆದ ಒಂದು ವರ್ಷದಿಂದ ಮಳೆಗಾಲದ ಸಮಯದಲ್ಲಿ ಜನರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನೂ ಸಮಸ್ಯೆ ಪರಿಹರಿಸಲು ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.