Heavy Rain | ಚಿಕ್ಕಬಳ್ಳಾಪುರದಲ್ಲಿ ಭಾರಿ ಮಳೆಗೆ ಕರೆಗಳಂತಾದ ಹಳ್ಳಿಗಳು
ಚಿಕ್ಕಬಳ್ಳಾಪುರ : ಗಡಿಜಿಲ್ಲೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ನಾನಾ ಅವಾಂತರಗಳು ಸೃಷ್ಟಿಯಾಗಿವೆ.
ನಿನ್ನೆ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದಾಗಿ ಹತ್ತಾರು ಗ್ರಾಮಗಳು ಜಲಾವೃತಗೊಂಡಿವೆ.
ಕೊತ್ತನೂರು, ಬೀಡಗಾನಹಳ್ಳಿ, ಚಿಕ್ಕಮರಳಿ, ನಂದಿ, ಯಲುವಹಳ್ಳಿ, ದೇವಿಶೆಟ್ಟಿಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆರಾಯ ನಾನಾ ಅವಾಂತರಗಳನ್ನು ಸೃಷ್ಟಿ ಮಾಡಿದ್ದಾನೆ.

ಅದರಲ್ಲೂ ಕೊತ್ತನೂರಿನಲ್ಲಿ ಮನೆಗಳು, ಹಾಲಿನ ಡೈರಿಗಳಿಗೆ ನೀರು ನುಗ್ಗಿದೆ.
ಕುಂಭದ್ರೋಣ ಮಳೆಗೆ ಹಲವು ಗ್ರಾಮಗಳು ಕೆರೆಗಳಂತೆ ಆಗಿವೆ.
ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.sa