Heavy rain in Haveri | 1000 ಎಕರೆ ಜಮೀನು ಜಲಾವೃತ
ಹಾವೇರಿ : ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಈಗಾಗಲೇ ಸಾಕಷ್ಟು ಪ್ರಮಾಣದ ಬೆಳೆ ನಾಶವಾಗಿದೆ.
ಸದ್ಯ ಮಳೆಯ ಆರ್ಭಟ ತಗ್ಗಿದ್ರೂ ಕೂಡ ಜಮೀನುಗಳಿಗೆ ನೀರು ನುಗ್ಗುತ್ತಲೇ ಇದೆ.
ಇದರಿಂದ ಹಾನಗಲ್ ತಾಲೂಕಿನ ರೈತರು ಕಂಗಾಲಾಗಿದ್ದಾಎ.
ತಡಸ – ಹಾನಗಲ್ ಮುಖ್ಯ ರಸ್ತೆ ಅವೈಜ್ಞಾನಿಕ ಕಾಮಗಾರಿ ನಡೆಸಿದ ಹಿನ್ನೆಲೆಯಲ್ಲಿ ಸುಮಾರು 1000 ಎಕರೆ ಜಮೀನು ಜಲಾವೃತವಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಹಾನಗಲ್ ತಾಲೂಕು ಮಹಾರಾಜಪೇಟೆ ಗ್ರಾಮದ ಸುತ್ತ ಮುತ್ತಲಿನ ಜಮೀನು ಜಲಾವೃತಗೊಂಡಿದೆ.
ಇದರಿಂದ ಸಚಿವರು, ಅಧಿಕಾರಿಗಳ ವಿರುದ್ಧ ಮಹಾರಾಜಪೇಟೆ ಗ್ರಾಮದ ರೈತರು ಆಕ್ರೋಶ ಹೊರಹಾಕಿದ್ದಾರೆ.
ಕೃಷಿ ಸಚಿವ ಬಿ.ಸಿ ಪಾಟೀಲ್ ಹಾಗೂ ಹಾವೇರಿ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಭಾವಚಿತ್ರ ಹಿಡಿದು ರೈತರು ಆಕ್ರೋಶ ಹೊರಹಾಕಿದ್ದಾರೆ.
ಸಾವಿರಾರು ಎಕರೆ ಗೋವಿನಜೋಳ ಹಾಗೂ ಸೋಯಾಬಿನ್ ಮಳೆಯಿಂದ ನಾಶವಾಗಿದೆ.
ನೀರೆಲ್ಲಾ ರೈತರ ಜಮೀನುಗಳಿಗೆ ನುಗ್ಗಿ ಅಪಾರ ಬೆಳೆ ಹಾನಿಯಾಗಿದೆ. ಹೀಗಾಗಿ ಸೂಕ್ತ ಪರಿಹಾರಕ್ಕಾಗಿ ರೈತರು ಆಗ್ರಹಿಸಿದ್ದಾರೆ.