Heavy Rain | ತುಮಕೂರಿನಲ್ಲಿ ಭಾರಿ ಮಳೆ – ಮನೆಗಳಿಗೆ ನುಗ್ಗಿದ ನೀರು
ತುಮಕೂರು : ಕಳೆದ ಕೆಲವು ದಿನಗಳಿಂದ ಸುಮ್ಮನಿದ್ದ ಮಳೆರಾಯ ಮತ್ತೆ ಅಬ್ಬರಿಸಲಾರಂಭಿಸಿದ್ದಾನೆ.
ಅದರಂತೆ ತುಮಕೂರಿನಲ್ಲಿ ನಿನ್ನೆ ತಡರಾತ್ರಿ ಭಾರಿ ಮಳೆ ಸುರಿದಿದ್ದು, ನಾನಾ ಅವಾಂತರಗಳನ್ನು ಸೃಷ್ಠಿಯಾಗಿದೆ.
ತುಮಕೂರು ನಗರದ ಸದಾಶಿವನಗರ, ನಝರಾಬಾದ್, ವೀರಾಪುರ ಪಿ.ಎಚ್ ಕಾಲೋನಿಯ ಮನೆಗಳಿಗೆ ನೀರು ನುಗ್ಗಿದೆ.

ಹಲವು ಮನೆಯೊಳಗೆ ಮೂರು ಅಡಿ ನಿಂತಿದೆ. ಇದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಮಳೆ ನೀರು ರಸ್ತೆ ಮೇಲೂ ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ತೊಡಕು ಉಂಟಾಗಿದೆ.
ಇತ್ತ ಮನೆಯಲ್ಲಿ ನೀರು ತುಂಬಿಕೊಂಡಿರುವ ಕಾರಣ ಜನರು ನೀರನ್ನು ಹೊರಹಾಕುತ್ತಿದ್ದಾರೆ.








