Heavy Rain | ಗದಗ ಜಿಲ್ಲೆಯಲ್ಲಿ ಮಳೆರಾಯನ ರುದ್ರನರ್ತನ
ಗದಗ : ರಾಜ್ಯದಲ್ಲಿ ಮಳೆರಾಯ ಅಬ್ಬರ ಮುಂದುವರೆದಿದೆ. ಅದರಂತೆ ಗದಗ ಜಿಲ್ಲೆಯಲ್ಲೂ ವರುಣ ಆರ್ಭಟಿಸಿದ್ದು, ನಾನಾ ಅವಾಂತರಗಳನ್ನು ಸೃಷ್ಟಿ ಮಾಡುತ್ತಿದ್ದಾನೆ.
ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿವೆ.
ನಿನ್ನೆ ರಾತ್ರಿ ಕೂಡ ಜಿಲ್ಲೆಯಲ್ಲಿ ಭಾರಿ ಸುರಿದಿದ್ದು, ಸಿಹಿಹಳ್ಳ ಹಾಗೂ ಸೌಳ ಹಳ್ಳ ಉಕ್ಕಿ ಹರಿದಿದೆ.
ಪರಿಣಾಮ ಮದಗಾನೂರಿನ 500ಕ್ಕೂ ಹೆಚ್ಚುಮನೆಗೆ ಮಳೆ ನೀರು ನುಗ್ಗಿದೆ.
ಮನೆಗಳಿಗೆ ನೀರು ನುಗ್ಗಿದ ಕಾರಣ ಜನರು ಕಂಗಾಲಾಗಿದ್ದಾರೆ.
ಬಹುತೇಕ ರೈತರ ಮನೆಯಲ್ಲಿನ ಧಾನ್ಯದರಾಶಿ ಹಾಳಾಗಿವೆ.
ಶೇಂಗಾ, ಈರುಳ್ಳಿ, ಮೆಣಸಿನಕಾಯಿ ಸೇರಿ ಇತರೆ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ಇದರಿಂದ ಜನರ ಜೀವನ ಅಸ್ತವ್ಯಸ್ತಗೊಂಡಿದೆ.