heavy rain
ಬೆಂಗಳೂರು: ಕಳೆದ ಕೆಲ ದಿನಗಳಿಂದಲೂ ಸಿಲಿಕಾನ್ ಸಿಟಿಯಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ವರುಣ ಇಂದೂ ಕೂಡ ನಗರಾದ್ಯಂತ ತನ್ನ ಆಬ್ಟ ಮುಂದುವರೆಸಲಿದ್ದಾನೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ 2 ದಿನಗಳಿಂದ ಸುರಿದ ಭಾರೀ ಮಳೆಗೆ ಈಗಾಗಲೇ ನಲುಗಿ ಹೋಗಿರುವ ಸಿಲಿಕಾನ್ ಸಿಟಿಯಲ್ಲಿ ಬುಧವಾರ ಕೂಡ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ನವೆಂಬರ್ ಅಂತ್ಯದವರೆಗೆ ಪದವಿಪೂರ್ವ ವೃತ್ತಿಪರ ಕೋರ್ಸ್‌ಗಳಿಗೆ ಸೀಟು ಹಂಚಿಕೆ ಪ್ರಕ್ರಿಯೆ

ನಿನ್ನೆ ಒಂದೇ ದಿನ ಬೆಂಗಳೂರು ನಗರ ಜಿಲ್ಲೆಯ ರಾಜರಾಜೇಶ್ವರಿ ನಗರದಲ್ಲಿ 87.5 ಎಂಎಂ, ಚನ್ನೇಹಳ್ಳಿ 126.5 ಎಂಎಂ, ಕಗ್ಗಲೀಪುರ 67 ಎಂಎಂ, ನೆಲಗುಳಿ 65.5 ಎಂಎಂ, ಬಸವನಗುಡಿ 64.45 ಎಂಎಂ, ಮಚೋಹಳ್ಳಿ 74.5 ಎಂಎಂ, ಕೊಡಿಗೇಹಳ್ಳಿ 66 ಎಂಎಂ ಮಳೆಯಾಗಿದೆ. ಧಾರಾಕಾರ ಮಳೆಯಿಂದಾಗಿ ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ. ದೈನಂದಿನ ಕೆಲಸಗಳಿಗೆ ಹೋಗುವ ಜನರು ಮಳೆರಾಯನ ಆರ್ಭಟದಿಂದಾಗಿ ತೊಂದರೆ ಎದುರಿಸುವಂತಾಗಿದ್ದು, ಇಂದೂ ಸಹ ಇದೇ ಪರಿಸ್ಥಿತಿ ಎದುರಾಗುವ ಬಗ್ಗೆ ಭವಿಷ್ಯ ನುಡಿದಿದೆ ಹವಾಮಾನ ಇಲಾಖೆ.

heavy rain
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel