Heavy Rain | ತುಮಕೂರಿನಲ್ಲಿ ಭಾರಿ ಮಳೆ : ಮನೆಗಳಿಗೆ ನುಗ್ಗಿದ ನೀರು
ತುಮಕೂರು : ಕಲ್ಪತರು ನಾಡಿನಲ್ಲಿ ತುಮಕೂರಿನಲ್ಲಿ ಮಳೆರಾಯನ ಅಬ್ಬರ ಮುಂದುವರೆದಿದೆ.
ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ನಾನಾ ಅವಾಂತರಗಳು ಸೃಷ್ಠಿಯಾಗಿವೆ.
ಅದರಂತೆ ಗುಬ್ಬಿ ತಾಲೂಕಿನ ಚೇಳೂರು ಬಳಿಯ ಸಿ.ಅರಿವೇಸಂದ್ರ ಗ್ರಾಮದಲ್ಲಿ ನಿನ್ನೆ ರಾತ್ರಿ ಧೋ ಎಂದು ಮಳೆಯಾಗಿದೆ.

ಇದರ ಪರಿಣಾಮ ಗ್ರಾಮದ ಮನೆಗಳಿಗೆ ಮಳೆ ನೀರು ನುಗ್ಗಿದೆ. ಅಲ್ಲದೆ ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ.
ರಾತ್ರಿ ಪೂರ್ತಿ ಮಳೆಯಾದ ಪರಿಣಾಮ ಸುಮಾರು 7ಮನೆಗಳಿಗೆ ಹಾನಿಯಾಗಿದ್ದು, 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.
ಗ್ರಾಮದಲ್ಲಿ ಸರಿಯಾಗಿ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಮಳೆನೀರು ಮನೆಗಳಿಗೆ ನುಗ್ಗೋಕೆ ಕಾರಣ ಎನ್ನಲಾಗಿದೆ.
ಇದರಿಂದ ಗ್ರಾಮಸ್ಥರು ಸ್ಥಳೀಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. Heavy rains in Tumkur