ಹೀರೋ ಮೋಟೋಕಾರ್ಪ್ ಬೈಕ್ ಹಾಗೂ ಸೈಕಲ್ ಗಳ ಬೆಲೆ ಏರಿಕೆ..!
ನವದೆಹಲಿ: ಏಪ್ರಿಲ್ ತಿಂಗಳಿನಿಂದ ದ್ವಿಚಕ್ರ ವಾಹನಗಳ ಬೆಲೆ ಏರಿಕೆ ಮಾಡುವುದಾಗಿ ಹೀರೋ ಮೋಟೋಕಾರ್ಪ್ ಹೇಳಿಕೊಂಡಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಹೀರೋ ಮೋಟೋಕಾರ್ಪ್ ಕಂಪನಿಯು, ಉತ್ಪಾದನಾ ವೆಚ್ಚ ಏರಿಕೆ ಮತ್ತು ಬಿಡಿಭಾಗ ದರ ಹೆಚ್ಚಳದಿಂದಾಗಿ ಮುಂದಿನ ತಿಂಗಳಿನಿಂದ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಬೆಲೆಯಲ್ಲಿ 2500 ರೂಪಾಯಿಯ ವರೆಗೆ ಹೆಚ್ಚಳವಾಗಲಿದೆ ಎಂದು ಹೇಳಿಕೊಂಡಿದೆ.
ಹೀರೋ ಮೊಟೊಕಾರ್ಪ್ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಆಫ್ ಇಂಡಿಯಾಗೆ ಸಲ್ಲಿಸಿದ ಅರ್ಜಿಯಲ್ಲಿ, ಮುಂದಿನ ತಿಂಗಳಿನಿಂದ ತನ್ನ ಮೋಟಾರು ಸೈಕಲ್ ಗಳು ಮತ್ತು ಸ್ಕೂಟರ್ ಗಳ ಎಕ್ಸ್ ಶೋರೂಂ ಬೆಲೆಯಲ್ಲಿ 2021 ರ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಬೆಲೆಯನ್ನು ಹೆಚ್ಚಿಸುತ್ತಿರುವುದಾಗಿ ಪ್ರಕಟಿಸಿದೆ.
10 ಹಾವು.. 2 ಚೇಳು.. ಅಂಗನವಾಡಿಯೋ..? ಹುತ್ತವೋ..?