ಹೈಕೋರ್ಟ್ ತೀರ್ಪಿನಿಂದ ಎಲ್ಲಾ ಧರ್ಮಗಳ ಆಚರಣೆಗಳಿಗೆ ಕುತ್ತು ಬರಲಿದೆ : ಅಮಿನ್ ಮೊಹಿನ್ಸಿನ್ – Saaksha Tv
ಮಡಿಕೇರಿ: ಹೈಕೋರ್ಟ್ ತೀರ್ಪ್ ನಿಂದ ಎಲ್ಲಾ ಧರ್ಮಗಳ ಆಚರಣೆಗಳಿಗೆ ಕುತ್ತು ಬರಲಿದೆ ಎಂದು ಬದ್ರಿಯಾ ಜಮಾಅತ್‍ನ ಅಧ್ಯಕ್ಷರಾದ ಮಡಿಕೇರಿ ನಗರಸಭೆಯ ಎಸ್‍ಡಿಪಿಐ ಸದಸ್ಯರು ಅಮಿನ್ ಮೊಹಿನ್ಸಿನ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಮುಸ್ಲಿಂ ಧರ್ಮದ ಆಚರಣೆಯ ವಿರುದ್ಧದ ತೀರ್ಪೆಂದು ಜನರು ಭಾವಿಸಬಾರದು ಬದಲಾಗಿ ಇದು ಎಲ್ಲಾ ಧರ್ಮಗಳ ಆಚರಣೆ ವಿರುದ್ಧ ತೀರ್ಪೆಂದು ಭಾವಿಸಬೇಕು. ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಬೇಕು ಇಲ್ಲದಿದ್ದರೆ ಮುಂದೆ ಎಲ್ಲಾ ಧರ್ಮಗಳ ಆಚರಣೆಗಳಿಗೆ ಕುತ್ತು ಬರಲಿದೆ. ಹೀಗಾಗಿ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿ ನ್ಯಾಯ ಪಡಿಬೇಕು ಎಂದು ಮನವಿ ಮಾಡಿದರು.
ಕೋರ್ಟಿನಲ್ಲಿ ವಿಚಾರಣೆ ವೇಳೆ ಹಿಜಾಬ್ ಮುಖ್ಯವಾ ಅಥವಾ ಶಿಕ್ಷಣ ಮುಖ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ. ಈ ರೀತಿ ಪ್ರಶ್ನೆ ಮಾಡುವುದು ಸರಿಯಲ್ಲ. ಇದು ತಂದೆ, ತಾಯಿಯರನ್ನು ಮುಂದೆ ಇಟ್ಟು ಯಾರು ಬೇಕು, ಎರಡು ಕಣ್ಣುಗಳಲ್ಲಿ ಯಾವುದು ಮುಖ್ಯ ಎಂದು ಪ್ರಶ್ನಿಸಿದರೇ ಆಯ್ಕೆ ಮಾಡಲು ಹೇಗೆ ಅಸಾಧ್ಯವಾಗುತ್ತದೆಯೋ ಅದೇ ರೀತಿಯಾಗಿದೆ.
ಆದರೆ ಮಕ್ಕಳಿಗೆ ಶಿಕ್ಷಣ ಮತ್ತು ಧರ್ಮ ಎರಡು ಮುಖ್ಯವಾಗಿರುತ್ತದೆ. ಹೀಗಾಗಿ ಮತ್ತೆ ಈ ಪ್ರಕರಣ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸುವ ಚಿಂತನೆ ಮಾಡಬೇಕು ಎಂದು ಹೇಳಿದರು.