ADVERTISEMENT
Friday, August 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ದೇಶ - ವಿದೇಶ

ಲಡಾಖ್ ಚೆಕ್‌ಪೋಸ್ಟ್‌ನಲ್ಲಿ ‘ವಿ ಆರ್ ಜೆನ್ ಜಿ’ ಎಂದ ಯುವತಿ: “ಜಾಂತೇ ನಹೀಂ ಹೋ ಮೇರಾ ಬಾಪ್ ಕೌನ್ ಹೈ” ಗೊತ್ತಾ ಸಾಲಿಗೆ ಹೋಲಿಸಿ ಟಾಂಗ್ ನೀಡಿದ ಓಮರ್ ಅಬ್ದುಲ್ಲಾ!

Shwetha by Shwetha
August 21, 2026
in ದೇಶ - ವಿದೇಶ, National, Newsbeat
Share on FacebookShare on TwitterShare on WhatsappShare on Telegram

ಶ್ರೀನಗರ: ಲಡಾಖ್‌ನ ಅತ್ಯಂತ ಸೂಕ್ಷ್ಮ ಪ್ರದೇಶವಾದ ಮಿನಿಮಾರ್ಗ್ ಚೆಕ್‌ಪೋಸ್ಟ್‌ನಲ್ಲಿ ಪ್ರವಾಸಿ ಯುವತಿಯೊಬ್ಬಳು ಭದ್ರತಾ ಸಿಬ್ಬಂದಿಯೊಂದಿಗೆ ನಡೆಸಿದ ಹೈಡ್ರಾಮಾ ಮತ್ತು ದರ್ಪದ ವರ್ತನೆ ಇದೀಗ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಹಕ್ಕನ್ನು ಪ್ರತಿಪಾದಿಸುವ ಭರದಲ್ಲಿ ನಾವು ‘ಜೆನ್ ಜಿ’ ತಲೆಮಾರಿನವರು ಎಂದು ಯುವತಿ ಹೆೇಳಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ಯುವತಿಗೆ ಅತ್ಯಂತ ಖಡಕ್ ಮತ್ತು ವ್ಯಂಗ್ಯಾತ್ಮಕ ಕೌಂಟರ್ ನೀಡಿದ್ದಾರೆ.

ಘಟನೆಯ ಹಿನ್ನೆಲೆ ಏನು?

Related posts

‘ಕರ್ನಾಟಕ ಬಲಿಷ್ಠವಾದರೆ ದಕ್ಷಿಣ ಭಾರತ, ಭಾರತವೂ ಬಲಿಷ್ಠ’: ಡಿಕೆಶಿ

‘ಕರ್ನಾಟಕ ಬಲಿಷ್ಠವಾದರೆ ದಕ್ಷಿಣ ಭಾರತ, ಭಾರತವೂ ಬಲಿಷ್ಠ’: ಡಿಕೆಶಿ

August 21, 2026
ಮಗಳು ಟಾಕ್ಸಿಕ್ ವಿರುದ್ಧ ಸಿಡಿದೆದ್ದರೆ ತಂದೆ ಯಶ್‌ ಪರ ಬ್ಯಾಟಿಂಗ್- ರಾಕಿಂಗ್ ಸ್ಟಾರ್ ಯಶ್‌ ಕನ್ನಡ ಚಿತ್ರರಂಗದ ಕೊಹಿನೂರ್ ವಜ್ರ ಎಂದ ರಾಜೇಂದ್ರ ಸಿಂಗ್ ಬಾಬು

ಮಗಳು ಟಾಕ್ಸಿಕ್ ವಿರುದ್ಧ ಸಿಡಿದೆದ್ದರೆ ತಂದೆ ಯಶ್‌ ಪರ ಬ್ಯಾಟಿಂಗ್- ರಾಕಿಂಗ್ ಸ್ಟಾರ್ ಯಶ್‌ ಕನ್ನಡ ಚಿತ್ರರಂಗದ ಕೊಹಿನೂರ್ ವಜ್ರ ಎಂದ ರಾಜೇಂದ್ರ ಸಿಂಗ್ ಬಾಬು

August 21, 2026

ಕಳೆದ ಜುಲೈ 25ರಂದು ಲಡಾಖ್‌ನ ಕಾರ್ಗಿಲ್ ಜಿಲ್ಲೆಯ ಡ್ರಾಸ್ ಸಮೀಪವಿರುವ ಮಿನಿಮಾರ್ಗ್ ಚೆಕ್‌ಪೋಸ್ಟ್‌ನಲ್ಲಿ ಈ ಕಾವೇರಿದ ಪ್ರಸಂಗ ನಡೆದಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ದೇಶದ ಪ್ರಮುಖ ಸೇನಾ ಮುಖ್ಯಸ್ಥರು ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಡ್ರಾಸ್ ಕಡೆಗೆ ತೆರಳುತ್ತಿದ್ದರು. ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ಪ್ರಯಾಣ ರದ್ದಾಗಿದ್ದರಿಂದ, ಭದ್ರತಾ ದೃಷ್ಟಿಯಿಂದ ರಸ್ತೆ ಮಾರ್ಗದಲ್ಲಿ ಸಚಿವರ ಕಾನ್ವಾಯ್ ಚಲಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿಗಳು ಸಾರ್ವಜನಿಕರ ಹಾಗೂ ಪ್ರವಾಸಿಗರ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ತಡೆಹಿಡಿದಿದ್ದರು.

ಜೆನ್ ಜಿ ಎಂದ ಯುವತಿ ನಡೆಸಿದ ಹೈಡ್ರಾಮಾ

ಹಲವು ಗಂಟೆಗಳ ಕಾಲ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದ್ದರಿಂದ ಅಸಮಾಧಾನಗೊಂಡ ಪ್ರವಾಸಿಗರ ಗುಂಪಿನಲ್ಲಿದ್ದ ಯುವತಿಯೊಬ್ಬಳು ನೇರವಾಗಿ ಭದ್ರತಾ ಸಿಬ್ಬಂದಿ ಬಳಿ ತೆರಳಿ ತೀವ್ರ ವಾಗ್ವಾದ ನಡೆಸಿದ್ದಾಳೆ. ನಾವು ಜೆನ್ ಜಿ, ಇಂತಹ ವಿಚಾರಗಳನ್ನು ಅಥವಾ ಅನಾನುಕೂಲಗಳನ್ನು ನಾವು ಸಹಿಸುವುದಿಲ್ಲ ಎಂದು ಆಕೆ ಭದ್ರತಾ ಸಿಬ್ಬಂದಿಯ ಮೇಲೆಯೇ ಕೂಗಾಡಿದ್ದಾಳೆ. ರಸ್ತೆಯಲ್ಲಿ ಮಕ್ಕಳು ಮತ್ತು ಕುಟುಂಬಗಳು ಸಿಲುಕಿಕೊಂಡಿದ್ದು, ತಮಗೆ ಪ್ರತ್ಯೇಕ ಆದ್ಯತೆ ನೀಡಬೇಕು ಎಂದು ಆಕೆ ಒತ್ತಾಯಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.

ಓಮರ್ ಅಬ್ದುಲ್ಲಾ ಖಡಕ್ ಕೌಂಟರ್

ಈ ವಿಡಿಯೋ ಕುರಿತು ತಮ್ಮ ಅಧಿಕೃತ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ಯುವತಿಯ ವರ್ತನೆಯನ್ನು ತೀವ್ರವಾಗಿ ತಳೆದಿದ್ದಾರೆ. ನಾವು ಜೆನ್ ಜಿ ಎಂಬ ಸಾಲುಗಳನ್ನು ಈ ರೀತಿ ಪ್ರದರ್ಶಿಸುವುದು ಹೊಸ ತಲೆಮಾರಿನ ಪ್ರಗತಿಪರ ಗುರುತಾಗುವ ಬದಲು, ಹಳೆಯ ಕಾಲದ ನನ್ನ ಅಪ್ಪ ಯಾರು ಗೊತ್ತಾ ಎನ್ನುವ ಸಾಂಪ್ರದಾಯಿಕ ಅಹಂಕಾರದ ಮಾತಿನಂತೆ ಕೇಳಿಸುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಸಣ್ಣಪುಟ್ಟ ವಿಚಾರಗಳಿಗೂ ಅಥವಾ ಭದ್ರತಾ ನಿಯಮಗಳನ್ನು ಮೀರಲು ಜೆನ್ ಜಿ ಎಂಬ ಹೆಸರನ್ನು ಬೆದರಿಕೆಯ ಅಥವಾ ದರ್ಪದ ಅಸ್ತ್ರವಾಗಿ ಬಳಸಿದರೆ, ಇಡೀ ಯುವ ಪೀಳಿಗೆಯ ಬಗ್ಗೆ ಸಮಾಜದಲ್ಲಿರುವ ಉತ್ತಮ ಅಭಿಪ್ರಾಯವೇ ಕುಸಿದುಹೋಗುತ್ತದೆ ಎಂದು ಓಮರ್ ಅಬ್ದುಲ್ಲಾ ಎಚ್ಚರಿಸಿದ್ದಾರೆ. ದೇಶದ ಭದ್ರತೆ ಮತ್ತು ಸೈನಿಕರ ಪ್ರೋಟೋಕಾಲ್ ಎದುರು ಪ್ರವಾಸಿಗರ ಅಹಂಕಾರ ನಡೆಯುವುದಿಲ್ಲ ಎಂಬುದನ್ನು ಅವರು ಪರೋಕ್ಷವಾಗಿ ನೆನಪಿಸಿದ್ದಾರೆ.

ಪ್ರಸ್ತುತ ಈ ವಿಡಿಯೋ ಮತ್ತು ಓಮರ್ ಅಬ್ದುಲ್ಲಾ ಅವರ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಭದ್ರತಾ ಪಡೆಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಯುವತಿಯ ವರ್ತನೆಗೆ ಸಾರ್ವಜನಿಕರಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ShareTweetSendShare
Join us on:

Related Posts

‘ಕರ್ನಾಟಕ ಬಲಿಷ್ಠವಾದರೆ ದಕ್ಷಿಣ ಭಾರತ, ಭಾರತವೂ ಬಲಿಷ್ಠ’: ಡಿಕೆಶಿ

‘ಕರ್ನಾಟಕ ಬಲಿಷ್ಠವಾದರೆ ದಕ್ಷಿಣ ಭಾರತ, ಭಾರತವೂ ಬಲಿಷ್ಠ’: ಡಿಕೆಶಿ

by Shwetha
August 21, 2026
0

ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ 31ನೇ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕ ಹಾಗೂ ದಕ್ಷಿಣ ಭಾರತದ ಆರ್ಥಿಕ ಹಿತಾಸಕ್ತಿಗಳ ಕುರಿತು ಮಹತ್ವದ...

ಮಗಳು ಟಾಕ್ಸಿಕ್ ವಿರುದ್ಧ ಸಿಡಿದೆದ್ದರೆ ತಂದೆ ಯಶ್‌ ಪರ ಬ್ಯಾಟಿಂಗ್- ರಾಕಿಂಗ್ ಸ್ಟಾರ್ ಯಶ್‌ ಕನ್ನಡ ಚಿತ್ರರಂಗದ ಕೊಹಿನೂರ್ ವಜ್ರ ಎಂದ ರಾಜೇಂದ್ರ ಸಿಂಗ್ ಬಾಬು

ಮಗಳು ಟಾಕ್ಸಿಕ್ ವಿರುದ್ಧ ಸಿಡಿದೆದ್ದರೆ ತಂದೆ ಯಶ್‌ ಪರ ಬ್ಯಾಟಿಂಗ್- ರಾಕಿಂಗ್ ಸ್ಟಾರ್ ಯಶ್‌ ಕನ್ನಡ ಚಿತ್ರರಂಗದ ಕೊಹಿನೂರ್ ವಜ್ರ ಎಂದ ರಾಜೇಂದ್ರ ಸಿಂಗ್ ಬಾಬು

by Shwetha
August 21, 2026
0

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಸೃಷ್ಟಿಸಿರುವ ಹವಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ನಡುವೆಯೇ, ನಟಿ ರಿಷಿಕಾ ಸಿಂಗ್ 'ಟಾಕ್ಸಿಕ್' ಸಿನಿಮಾದ...

‘ಕಾಂಗ್ರೆಸ್ ದೇಶ ವಿಭಜನೆಗೆ ಅಡಿಪಾಯ ಹಾಕಿತು’: ಅಮಿತ್ ಶಾ

‘ಕಾಂಗ್ರೆಸ್ ದೇಶ ವಿಭಜನೆಗೆ ಅಡಿಪಾಯ ಹಾಕಿತು’: ಅಮಿತ್ ಶಾ

by Shwetha
August 21, 2026
0

ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಲ್ಲಿ 'ವಂದೇ ಮಾತರಂ' ಗೀತೆಯ ಕೇವಲ ಎರಡು ಚರಣಗಳನ್ನು ಮಾತ್ರ ಹಾಡುವ ನಿರ್ಧಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ....

ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ದೇಶವಿರೋಧಿ ನಡೆ: ವಂದೇ ಮಾತರಂ ತುಂಡರಿಸಿದ ಕಾಂಗ್ರೆಸ್ ವಿರುದ್ಧ  ಅಮಿತ್ ಷಾ ಗರಂ!

ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ದೇಶವಿರೋಧಿ ನಡೆ: ವಂದೇ ಮಾತರಂ ತುಂಡರಿಸಿದ ಕಾಂಗ್ರೆಸ್ ವಿರುದ್ಧ ಅಮಿತ್ ಷಾ ಗರಂ!

by Shwetha
August 21, 2026
0

ನವದೆಹಲಿ: ಕಾಂಗ್ರೆಸ್ ಪಕ್ಷವು ತಾನು ಆಯೋಜಿಸುವ ಕಾರ್ಯಕ್ರಮಗಳಲ್ಲಿ 'ವಂದೇ ಮಾತರಂ' ರಾಷ್ಟ್ರೀಯ ಗೀತೆಯ ಸಂಪೂರ್ಣ ಆವೃತ್ತಿಯನ್ನು ಹಾಡದೆ, ಕೇವಲ ಮೊದಲ ಎರಡು ನುಡಿಗಳನ್ನು ಮಾತ್ರ ಹಾಡಲು ನಿರ್ಣಯ...

ದಿನ ಭವಿಷ್ಯ (12-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (21-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
August 21, 2026
0

ದಿನ ಭವಿಷ್ಯ: 21-08-2026. ಮೇಷ ರಾಶಿ ಸಾಮಾನ್ಯ ಫಲ: ಇಂದಿನ ದಿನ ನಿಮಗೆ ಅತ್ಯುತ್ಸಾಹದಿಂದ ಕೂಡಿರುತ್ತದೆ. ನಿಮ್ಮಲ್ಲಿರುವ ನಾಯಕತ್ವದ ಗುಣಗಳು ಹೊರಹೊಮ್ಮಲಿವೆ. ಉದ್ಯೋಗ ಮತ್ತು ವ್ಯಾಪಾರ: ಕಚೇರಿಯಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram