Hijab Controvercy : ಹೈಕೋರ್ಟ್ ವಿಚಾರಣೆ ನಾಳೆಗೆ ಮುಂದೂಡಿಕೆ
ಬೆಂಗಳೂರು : ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ – ಕೇಸರಿ ಸಾಲು ಸಂಘರ್ಷ ಸದ್ಯಕ್ಕೆ ಹೈಕೋರ್ಟ್ ಅಂಗಳದಲ್ಲಿದೆ…
ಹಿಜಾಬ್ ಧರಿಸಲು ಅವಕಾಶ ನೀಡಲು ರಾಜ್ಯ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಬುಧವಾರ ಕೂಡ ತ್ರಿಸದಸ್ಯ ಪೀಠದಲ್ಲಿ ನಡೆಯಿತು.
ಆದ್ರೆ ಹೈ ಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ..
ಮೊದಲಿಗೆ ಅರ್ಜಿ ಪರ ಮತ್ತು ವಿರುದ್ದವಾಗಿ ವಕೀಲರ ವಾದ ಪ್ರತಿವಾದವನ್ನು ನ್ಯಾಯಾಮೂರ್ತಿಗಳು ಕೇಳಿಸಿಕೊಂಡರು.
ನ್ಯಾಯಪೀಠದತ್ತ ಎರಡು ಕಡೆಗಳ ವಕೀಲರು ಕೆಲವು ಮಹತ್ವದ ಮಾಹಿತಿಗಳನ್ನು ತಿಳಿಸಿದರು.
ಇದೇ ವೇಳೆ ನ್ಯಾಯಾಪೀಠವು ಹಿಜಾಬ್ ವಿಚಾರಣೆ ಗುರುವಾರ ಮಧ್ಯಾಹ್ನ 2:30ಕ್ಕೆ ಮುಂದೂಡಿಕೆ ಮಾಡಿತು.








