Hijab Controvercy : ವಿದ್ಯಾರ್ಥಿಗಳೆಲ್ಲರೂ ಸಮವಸ್ತ್ರ ತೊಟ್ಟು ಕಾಲೇಜಿಗೆ ಬರಬೇಕು : ಸುಕುಮಾರ ಶೆಟ್ಟಿ
ಉಡುಪಿ : ವಿದ್ಯಾಸಂಸ್ಥೆಗಳಲ್ಲಿ ಸಮವಸ್ತ್ರದ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳೆಲ್ಲರೂ ಸಮವಸ್ತ್ರ ತೊಟ್ಟು ಕಾಲೇಜಿಗೆ ಬರಬೇಕು. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸರಿಯಲ್ಲ. ನಿಯಮಕ್ಕೆ ವಿರುದ್ಧವಾದ ಬೆಳವಣಿಗೆಯನ್ನು ನಾವು ಸಹಿಸುವುದಿಲ್ಲ ಎಂದು ಬೈಂದೂರು ಶಾಸಕ , ಕುಂದಾಪುರ ಬಿ. ಬಿ ಹೆಗ್ಡೆ ಕಾಲೇಜಿನ ಅಧ್ಯಕ್ಷ ಸುಕುಮಾರ ಶೆಟ್ಟಿ ಅವರು ಹೇಳಿದ್ದಾರೆ
ಉಡುಪಿಯಲ್ಲಿ ಮಾತನಾಡಿರುವ ಅವರು ನಮ್ಮ ಕಾಲೇಜಿನಲ್ಲಿ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸುತ್ತೇವೆ. ಯಾವುದೇ ಪ್ರತಿಭಟನೆಗಳನ್ನು ಮಾಡಲು ಮುಂದಾಗಬಾರದು. ಹೈಕೋರ್ಟ್ ನ ಆದೇಶ ಏನಿದೆ ಅದನ್ನು ನಾವು ಪಾಲಿಸುತ್ತೇವೆ ಎಂದಿದ್ದಾರೆ… ಬಿಬಿ ಹೆಗ್ದೆ ಕಾಲೇಜಿನಲ್ಲಿ ಹಿಜಾಬ್ ಗಾಗಿ ಪೋಷಕರು, ವಿದ್ಯಾರ್ಥಿನೀಯರು ಒತ್ತಾಯ ಮಾಡಿದ್ದರು..