Hijab Controversy | ವಿಜಯಪುರದಲ್ಲಿ ಹಿಜಾಬ್ ಸದ್ದು | ಕಾಲೇಜಿಗೆ ರಜೆ Hijab Controversy in vijayapura
ವಿಜಯಪುರ ; ಹಿಜಾಬ್ – ಕೇಸರಿ ಶಾಲು ವಿವಾದ ಮುಂಬೈ ಕರ್ನಾಟಕಕ್ಕೆ ಕಾಲಿಟ್ಟಿದೆ.
ಜಿಲ್ಲೆಯ ಇಂಡಿ ಪಟ್ಟಣದ ಶಾಂತೇಶ್ವರ ಪದವಿ ಪೂರ್ವ, ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದಿದ್ದಾರೆ.
ಹಿಜಾಬ್ ವಿರೋಧಿಸಿ ವಿದ್ಯಾರ್ಥಿಗಳು ಕೇಸರಿ ಶಾಲು ತೊಟ್ಟು ಬಂದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಇಡೀ ಕಾಲೇಜಿಗೆ ಆಡಳಿತಿ ಮಂಡಳಿ ರಜೆ ಘೋಷಿಸಿದೆ.
ಶಾಂತೇಶ್ವರ ಪದವಿ ಪೂರ್ವ, ಪದವಿ ಕಾಲೇಜಿನ 20 ಕ್ಕೂ ಅಧಿಕ ವಿದ್ಯಾರ್ಥಿಗಳು ಹಿಜಾಬ್ ವಿರೋಧಿಸಿ ಕೇಸರಿ ಶಾಲು ಹಾಕಿ ಬಂದಿದ್ದರು.
ಅಲ್ಲದೇ ಕ್ಲಾಸ್ ಗಳಿಗೂ ಹಾಜರಾಗಲು ಹೋಗಿದ್ದರು. ಹೀಗಾಗಿ ಕೇಸರಿ ಶಾಲು ಹಾಕಿದವರನ್ನ ಉಪನ್ಯಾಸಕರು ಕ್ಲಾಸ್ ನಿಂದ ಹೊರ ಹಾಕಿದ್ದಾರೆ. ಜೊತೆಗೆ ಇಡೀ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.