ಎಕ್ಸಾಂಗಿಂತ ಹಿಜಾಬ್ ಮುಖ್ಯ ಅಂತ ಹೇಳಿ ಪರೀಕ್ಷೆ ಬರೆಯದೇ ಮನೆಗೆ ಹೋದ ವಿದ್ಯಾರ್ಥಿನಿಯರು Saaksha Tv
ಶಿವಮೊಗ್ಗ: ವಿದ್ಯಾರ್ಥಿನಿಯರು ಎಕ್ಸಾಂಗಿಂತ ಹಿಜಾಬ್ ಮುಖ್ಯ ಅಂತ ಹೇಳಿ ಪರೀಕ್ಷೆ ಬರೆಯದೇ ಮನೆಗೆ ಹೋಗಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ರಾಜ್ಯದಲ್ಲಿ ಹಿಜಾಬ್ –ಕೇಸರಿ ಶಾಲು ವಿವಾದ ತಾರಕಕ್ಕೇರಿದ ಬೆನ್ನಲ್ಲೆ ವಿವಾದ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಸಂಬಂಧ ಹೈಕೋರ್ಟ್ ತ್ರಿಸದಸ್ಯ ಪೀಠ ಮಧ್ಯಂತರ ಆದೇಶ ನೀಡಿತ್ತು. ಆದರೆ ಇಂದು ಶಾಲೆಗಳು ಪುನರಾರಂಭವಾಗಿದ್ದು, ವಿದ್ಯಾರ್ಥನಿಯರು ಹಿಜಾಬ್ ಧರಿಸಿಕೊಂಡು ಶಾಲೆಗೆ ಬಂದಿದ್ದರು. ಈ ಮೂಲಕ ಹೈಕೋರ್ಟ್ ಆದೇಶವನ್ನು ಉಲ್ಲಂಘಸಿದ್ದರು.
ಶಾಲೆಗೆ ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥನಿಯರಿಗೆ ಪರೀಕ್ಷೆಗೆ ಕೂರಲು ಅನುಮತಿ ನೀಡಿರಲಿಲ್ಲ. ಇದಕ್ಕೆ ವಿದ್ಯಾರ್ಥಿನಿಯರು ಎಕ್ಸಾಂಗಿಂತ ಹಿಜಾಬ್ ಮುಖ್ಯ ಅಂತ ಹೇಳಿ ಪರೀಕ್ಷೆ ಬರೆಯದೇ ಮನೆಗೆ ಹೋಗಿದ್ದಾರೆ. ನಾವು ಹಿಜಾಬ್ ಧರಿಸಿಯೇ ಶಾಲೆಗೆ ಹೋಗುತ್ತೇವೆ. ಶಾಲೆ ಬಿಡುತ್ತೇವೆ ಆದರೆ ಹಿಜಾಬ್ ತೆಗೆಯೊಲ್ಲ. ನಮಗೆ ಧರ್ಮ ಬೇಕು ಶಾಲೆ ಬೇಡವೇ ಬೇಡ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ.
ಅಲ್ಲದೇ ನಮಗೆ ಪೋಷಕರು ಹಿಜಾಬ್ ತೆಗೆಯಬೇಡ ಎಂದಿದ್ದಾರೆ. ಇಷ್ಟು ವರ್ಷ ಹಿಜಾಬ್ ತೆಗೆಯಲು ಸೂಚಿಸಿಲ್ಲ. ಆದರೆ ಇಂದು ಹಿಜಾಬ್ ತೆಗೆಯಿರಿ ಅಂದರೆ ಹೇಗೆ ತೆಗೆಯೋದು. ಇಸ್ಲಾಂ ಧರ್ಮದಲ್ಲಿ ಹಿಜಾಬ್ ತೆಗೆಯಲು ಅವಕಾಶವಿಲ್ಲ ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ.