Himachal Pradesh Election Result : ಹಿಮಾಚಲದಲ್ಲಿ ಮುಂದುವರೆದ ಸರ್ಕಾರ ಬದಲಿಸುವ ಟ್ರೆಂಡ್..
ಹಿಮಾಚಲ ಪ್ರದೇಶದಲ್ಲಿ 68 ವಿಧಾನಸಭಾ ಸ್ಥಾನಗಳಿಗೆ ಮತ ಎಣಿಕೆ ನಡೆಯುತ್ತಿದೆ. ಗುಡ್ಡಗಾಡು ರಾಜ್ಯದ ಜನ ಹಳೆ ಸಂಪ್ರದಾಯವನ್ನ ಮುಂದುರೆಸಿಕೊಂಡು ಬಂದಿದೆ. ಒಂದೇ ಪಕ್ಷ ಎರಡು ಭಾರಿ ಅಧಿಕಾರಕ್ಕೇರುವುದು 37 ವರ್ಷಗಳಿಂದ ಮಿಷನ್ ಇಂಪಾಸಿಬಲ್ ಎನಿಸಿದೆ.
5 ವರ್ಷಗಳ ನಂತರ ಸರ್ಕಾರ ಬದಲಿಸುವ ಟ್ರೆಂಡ್ ಈ ಭಾರಿಯೂ ಮುಂದುವರೆದಿದ್ದು, ಕಾಂಗ್ರೆಸ್, ಸರ್ಕಾರ ರಚನೆಯತ್ತ ಸಾಗುತ್ತಿದೆ. ಕಾಂಗ್ರೆಸ್ ಪಕ್ಷವು ಇದುವರೆಗೆ 35 ಸ್ಥಾನಗಳನ್ನು ಗೆದ್ದುಕೊಂಡಿದ್ದು, 4ರಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 14 ಸ್ಥಾನಗಳಲ್ಲಿ ಗೆದ್ದಿದ್ದು, 12ರಲ್ಲಿ ಮುಂದಿದೆ. ಇತರೆ ಅಭ್ಯರ್ಥಿಗಳು 2 ಸ್ಥಾನ ಗೆದ್ದು ಒಂದರಲ್ಲಿ ಮುನ್ನಡೆ ಸಾಧಿಸಿದ್ದಾರೆ. ಆಪ್ ಖಾತೆ ತೆರೆಯುವಲ್ಲಿ ಹಿಂದೆ ಬಿದ್ದಿದೆ.
ಮುಖ್ಯಮಂತ್ರಿ ಜೈರಾಮ್ ಠಾಕೂರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಚುನಾವಣಾ ಫಲಿತಾಂಶದ ಕುರಿತು ಅವರು ಹೇಳಿದರು – ನಾವು ಜನರ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ. ಐದು ವರ್ಷಗಳ ಕಾಲ ಸಹಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ನಾಯಕತ್ವಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ರಾಜ್ಯದ ಅಭಿವೃದ್ಧಿಗೆ ಸಕಾರಾತ್ಮಕ ವಿರೋಧದ ಪಾತ್ರ ನಿರ್ವಹಿಸುತ್ತೇವೆ ಎಂದಿದ್ದಾರೆ.
Himachal Pradesh Election Result: The trend of changing the government continued in Himachal..