Himachal Pradesh Election Result : ಕೈ ಮತ್ತು ಕಮಲದ ನಡುವೆ ಜಟಾಪಟಿ – ಟಫ್ ಫೈಟ್..
ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳ ಎಣಿಕೆ ಆರಂಭವಾಗಿದೆ. ಕಾಂಗ್ರೆಸ್ ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಸಧ್ಯಕ್ಕೆ ಎರಡೂ ಪಕ್ಷ ಸ್ಥಿತಿ ಡೋಲಾಯಾಮಾನವಾಗಿದೆ.
ಬಿಜೆಪಿ 34 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 31 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಮೂವರು ಸ್ವತಂತ್ರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದು ಇವರು ಕಿಂಗ್ ಮೇಕರ್ ಆಗುವ ಸಾಧ್ಯತೆ ಹೆಚ್ಚಾಗಿದೆ. ಆಪ್ ಇಲ್ಲಿಯವರೆಗೂ ಖಾತೆ ತೆರೆಯಲು ಸಾಧ್ಯವಾಗಿಲ್ಲ.
ಹಿಮಾಚಲದಲ್ಲಿ ಫಲಿತಾಂಶಕ್ಕೂ ಮೊದಲು ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪತ್ನಿ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪ್ರತಿಭಾ ವೀರಭದ್ರ ಸಿಂಗ್ ಅವರು ಸಿಎಂ ಹುದ್ದೆಗೆ ಹಕ್ಕು ಸಾಧಿಸಿದ್ದಾರೆ. ವೀರಭದ್ರ ಕುಟುಂಬದಿಂದ ಯಾರಾದರೂ ರಾಜ್ಯದ ಅಭಿವೃದ್ಧಿಯ ಪರಂಪರೆಯನ್ನು ಮುನ್ನಡೆಸಬೇಕೆಂದು ರಾಜ್ಯದ ಜನತೆ ಬಯಸುತ್ತಿದ್ದಾರೆ ಎಂದು ಹೇಳಿದರು.
ಸಮೀಕ್ಷೆಯಲ್ಲಿ ಬಿಜೆಪಿ ಬಹುಮತಕ್ಕೆ ಹತ್ತಿರವಾಗಿದೆ
ಎರಡು ದಿನಗಳ ಹಿಂದೆ ಬಂದ 8 ಎಕ್ಸಿಟ್ ಪೋಲ್ ಸಮೀಕ್ಷೆಗಳ ಪ್ರಕಾರ ಹಿಮಾಚಲದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮಬಲದ ಪೈಪೋಟಿ ಏರ್ಪಟ್ಟಿದೆ. ಈ ಸಮೀಕ್ಷೆಗಳಲ್ಲಿ ಬಿಜೆಪಿ 32ರಿಂದ 40ರ ನಡುವೆ ಅಂದರೆ ಬಹುಮತಕ್ಕೆ ಸಮೀಪದಲ್ಲಿದೆ. ಆದರೆ, ನಾಲ್ಕೂ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಪಕ್ಷ ಬಹುಮತಕ್ಕೆ ಹತ್ತಿರವಾಗಿದೆ.
Himachal Pradesh Election Result