ಕೆನಡಾದ (Canada) ಬ್ರಿಟಿಷ್ ಕೊಲಂಬಿಯಾದಲ್ಲಿನ ಹಿಂದೂ ದೇವಾಲಯ (Hindu Temple)ವು ದುಷ್ಕರ್ಮಿಗಳಿಂದ ಧ್ವಂಸವಾಗಿದೆ.
ಅಲ್ಲದೇ, ಧ್ವಂಸ ಮಾಡಿದ ದುಷ್ಕರ್ಮಿಗಳು ಹತ್ಯೆಯಾಗಿರುವ ಖಲಿಸ್ತಾನಿ ಭಯೋತ್ಪಾದಕರ (Khalistani Terrorist’s) ಪೋಸ್ಟರ್ಗಳನ್ನು ದೇವಾಲಯದ ಮುಖ್ಯ ಬಾಗಿಲಿಗೆ ಅಂಟಿಸಿದ್ದಾರೆ ಎನ್ನಲಾಗಿದೆ.
ಜೂನ್ 18 ರ ಹತ್ಯೆಯಲ್ಲಿ ಭಾರತದ ಪಾತ್ರವನ್ನು ಕೆನಡಾ ತನಿಖೆ ಮಾಡುತ್ತದೆ ಎಂದು ಪೋಸ್ಟರ್ನಲ್ಲಿ ಕೂಡ ಬರೆಯಲಾಗಿದೆ. ಪೋಸ್ಟರ್ನಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಫೋಟೋ ಕೂಡ ಹಾಕಲಾಗಿದೆ. ಧ್ವಂಸಗೊಂಡಿರುವ ದೇವಾಲಯವು ಸರ್ರೆಯಲ್ಲಿನ ಲಕ್ಷ್ಮಿ ನಾರಾಯಣ ಮಂದಿರ ಆಗಿದೆ.
ಕೊಲಂಬಿಯಾದಲ್ಲಿನ ಅತಿದೊಡ್ಡ ಮತ್ತು ಹಳೆಯ ಹಿಂದೂ ದೇವಾಲಯಗಳಲ್ಲಿ ಇದಾಗಿದ್ದು, ಇಂತಹ ಘಟನೆಗಳು ಕೆನಡಾದಲ್ಲ ಪದೇ ಪದೇ ನಡೆಯುತ್ತಿದ್ದು, ಈ ವರ್ಷ ನಡೆದ ಮೂರನೇ ದೇವಸ್ಥಾನ ಧ್ವಂಸ ಘಟನೆ ಇದಾಗಿದೆ.








