ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಪಂಡಿತ್ ಜಸರಾಜ್ ನಿಧನ
ವಾಷಿಂಗ್ಟನ್, ಅಗಸ್ಟ್ 17:ಹಿಂದೂಸ್ತಾನಿ ಹಿರಿಯ ಶಾಸ್ತ್ರೀಯ ಗಾಯಕ ಪಂಡಿತ್ ಜಸರಾಜ್ ನಿಧನರಾಗಿದ್ದಾರೆ. ಈ ವರ್ಷದ ಜನವರಿಯಲ್ಲಿ ಅವರಿಗೆ 90 ವರ್ಷ ತುಂಬಿತ್ತು. ಅವರು ಅಮೆರಿಕದ ನ್ಯೂಜೆರ್ಸಿಯಲ್ಲಿ ಕೊನೆಯುಸಿರೆಳೆದರು.

80 ವರ್ಷಗಳ ವೃತ್ತಿಜೀವನದೊಂದಿಗೆ, ಅವರು ಪದ್ಮಶ್ರೀ, ಪದ್ಮಭೂಷಣ್ ಮತ್ತು ಪದ್ಮವಿಭೂಷಣ ಸೇರಿದಂತೆ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದರು. ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ ಎಂದು ಹೇಳಲಾಗಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ








