ADVERTISEMENT
Tuesday, September 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪುತ್ತೂರು ಆರಾಧ್ಯ ದೈವನಿಗೆ ಈ ಬಾರಿ ಭಕ್ತರ ಹೃದಯ ಮಂದಿರದಲ್ಲಿ ಉತ್ಸವ…

admin by admin
April 16, 2020
in Newsbeat, Samagra karnataka
Share on FacebookShare on TwitterShare on WhatsappShare on Telegram

ಪುತ್ತೂರ ಮುತ್ತು ಶ್ರೀ ಮಹಾಲಿಂಗೇಶ್ವರ..
ಹತ್ತೂರ ಭಕ್ತರ ಪಾಲಿಸೊ ಶಂಬೋ ಶಂಕರ..

ಪುತ್ತೂರು ಸೀಮೆಯ ಒಡೆಯ, ಕಾರಣಿಕ ದೈವ, ಇತಿಹಾಸ ಪ್ರಸಿದ್ಧ ಮಹತೋಬರ್ ಶ್ರೀ ಮಹಾಲಿಂಗೇಶ್ವರನಿಗೆ ಈಗ ಜಾತ್ರಾ ಮಹೋತ್ಸವ. ಈ ಬಾರಿ ಕೊರೊನಾ ಸೋಂಕಿನ ಭೀತಿಯಿಂದಾಗಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಭಕ್ತರಿಗೆ ಮಹಾಲಿಂಗೇಶ್ವರನ ಸನ್ನಿಧಾನಕ್ಕೆ ಪ್ರವೇಶವಿಲ್ಲ, ರಥೋತ್ಸವದ ಸಂಭ್ರಮವಿಲ್ಲ. ಆದರೆ ಪ್ರತಿ ಮನವೂ ತಮ್ಮ ಆರಾಧ್ಯ ದೈವವನ್ನು ಸ್ಮರಿಸಿ ಕೊಂಡು, ಜಾತ್ರೆಯ ಸೊಬಗನ್ನು ನೆನಪಿಸಿಕೊಂಡು, ಜಾತ್ರೆಯ ಹತ್ತು ದಿನಗಳ ವೃತವನ್ನು ಪಾಲಿಸುತ್ತಾ ಮಹಾಲಿಂಗೇಶ್ವರನ ನಾಮವನ್ನು ಸ್ತುತಿಸುತ್ತಿದೆ. ಭಕ್ತರ ಭಕ್ತಿಯ ಉತ್ಸವದ ಈ ಸಂದರ್ಭದಲ್ಲಿ ಪುತ್ತೂರು ಮಹಾಲಿಂಗೇಶ್ವರನ ಜಾತ್ರೆಯ ಬಗ್ಗೆ ಒಂದು ಮೆಲುಕು.

Related posts

ಮೂರು ಅಡಿ ಕಟೌಟ್ ರವಿಕುಮಾರ್, ಯತ್ನಾಳ್, ಪ್ರತಾಪ್ ಸಿಂಹ ಜೊತೆಗೆ ಬನ್ನಿ;ಹೆಚ್ಚಿನ ಚಿಕಿತ್ಸೆಗೆ ಸಿಎಂ ಪರಿಹಾರ ನಿಧಿಯಿಂದ ಹಣ ಕೊಡಿಸುವೆ: ಪ್ರದೀಪ್ ಈಶ್ವರ್

ನನಗೊಂದು ಇಲಾಖೆ ಕೊಟ್ಟು ನೋಡಿ ಕೆಲಸ ಮಾಡಿ ತೋರಿಸ್ತೀನಿ: ಮಂತ್ರಿಸ್ಥಾನದ ಆಸೆ ಬಿಚ್ಚಿಟ್ಟ ಶಾಸಕ ಪ್ರದೀಪ್ ಈಶ್ವರ್

September 29, 2026
ಉಳ್ಳವರಿಗೆ ಗ್ಯಾರಂಟಿ ರದ್ದು ಮಾಡಬೇಕಾ, ಬಡವರಿಗೆ ಮಾತ್ರ ಭಾಗ್ಯ ಸೀಮಿತವಾಗಲಿ: ಬಿಜೆಪಿ ಶಾಸಕರ ಪ್ರಸ್ತಾವನೆಗೆ ಡಿಕೆಶಿ ಖಡಕ್ ಕೌಂಟರ್

ಬರ ಪರಿಸ್ಥಿತಿ, ಕಸ್ತೂರಿರಂಗನ್ ವರದಿ ಕುರಿತು ಸರ್ವಪಕ್ಷ ಸಭೆಗೆ ಡಿಕೆಶಿ ಕರೆ

September 29, 2026

ಹತ್ತೂರು ಕೊಟ್ಟರೂ ಪುತ್ತೂರು ಕೊಡೆ ಎನ್ನುವುದು ಇಲ್ಲಿ ಚಾಲ್ತಿಯಲ್ಲಿರುವ ಮಾತು. ಇದು ಪುತ್ತೂರಿನ ಬಗ್ಗೆ ಇಲ್ಲಿನ ಜನರಿಗೆ ಇರುವ ಅಭಿಮಾನವನ್ನು ತೋರಿಸುತ್ತದೆ. ಪುತ್ತೂರು ಸರ್ವ ಧರ್ಮ ಸಮನ್ವಯದ ಬೀಡು . ಗುಣಮಟ್ಟದ ಶಿಕ್ಷಣಕ್ಕೆ ಇಲ್ಲಿನ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ. ಹೊರರಾಜ್ಯಗಳಿಂದ ಕೂಡ ಶಿಕ್ಷಣಕ್ಕಾಗಿ ಇಲ್ಲಿಗೆ ವಿದ್ಯಾರ್ಥಿಗಳು ಬರುತ್ತಾರೆ. ಇಲ್ಲಿನ ವಿಶೇಷ ಇತಿಹಾಸ ಪ್ರಸಿದ್ಧ ಮಹತೋಬರ್ ಶ್ರೀ ಮಹಾಲಿಂಗೇಶ್ವರ.. ಪುತ್ತೂರಿನ ಜನ ಜಗತ್ತಿನಲ್ಲಿ ಎಲ್ಲೇ ಇರಲಿ, ಯಾರೇ ಆಗಿರಲಿ, ಅವರ ಮನೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಭಾವಚಿತ್ರಕ್ಕೆ ನಿತ್ಯ ಪೂಜೆ ಸಲ್ಲುತ್ತದೆ ಮಾತ್ರವಲ್ಲ ಈ ಮಹಾಲಿಂಗೇಶ್ವರನನ್ನು ನೆನೆದೇ ಅವರು ಯಾವುದೇ ಕಾರ್ಯ ಆರಂಭಿಸುವುದು.

ಕಾಶಿಯನ್ನು ಬಿಟ್ಟರೆ ದೇವಾಲಯದ ಎದುರು ಸ್ಮಶಾನ ಇರುವ ಮತ್ತೊಂದು ದೇವಾಲಯ ಇರುವುದು ಪುತ್ತೂರಲ್ಲಿ ಮಾತ್ರ. ಉಳಿದ ದೇವಾಲಯಗಳಂತೆ ವರ್ಷಕ್ಕೆ ಒಂದು ಬಾರಿ ಪುತ್ತೂರಿನ ಆರಾಧ್ಯ ಶ್ರೀ ಮಹಾಲಿಂಗೇಶ್ವರನಿಗೂ ಜಾತ್ರಾ ಮಹೋತ್ಸವ ನಡೆಯುತ್ತದೆ. ಏಪ್ರಿಲ್ 1 ರಂದು ಗೊನೆ ಕಡಿದು ಏಪ್ರಿಲ್ 10ರಂದು ಸಾಂಪ್ರದಾಯಿಕ ಧ್ವಜಾರೋಹಣ ನಡೆಯುವುದರೊಂದಿಗೆ ಪ್ರಾರಂಭವಾಗುವ ಈ ಜಾತ್ರೆಯು 9 ದಿನಗಳ ಕಾಲ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಈ ದಿನಗಳಲ್ಲಿ ಮಹಾಲಿಂಗೇಶ್ವರ ತನ್ನ ಭಕ್ತರ ಮನೆ ಬಾಗಿಲಿಗೆ ಬಂದು ದರ್ಶನ ಕೊಡುವುದು ಇಲ್ಲಿನ ವಿಶೇಷ. ಏಪ್ರಿಲ್ 16ರಂದು ದೂರದ ಬಲ್ನಾಡ್‌ ದೈವಸ್ಥಾನದಿಂದ ದಂಡನಾಯಕ ಮಲರಾಯರ ಜೊತೆ ಉಳ್ಳಾಲ್ತಿ ದೈವ ತನ್ನ ಭಂಡಾರದೊಂದಿಗೆ ದೇವರ ರಥೋತ್ಸವ ನೋಡಲು ಆಗಮಿಸುವುದು ಇಲ್ಲಿನ ಮತ್ತೊಂದು ವಿಶೇಷ. ದೇವಾಲಯದ ಹೊರಾಂಗಣಕ್ಕೆ ದೈವಗಳ ಭಂಡಾರ ಆಗಮಿಸಿದಾಗ ಸ್ವತಃ ದೇವರೇ ದೈವಗಳನ್ನು ಎದುರುಗೊಂಡು ಬರಮಾಡಿಕೊಳ್ಳುವುದನ್ನು ನೋಡಲು ಇಲ್ಲಿ ಮಾತ್ರ ಸಾಧ್ಯ. ಆ ಭಾವುಕ ಕ್ಷಣವನ್ನು ಕಣ್ಣು ತುಂಬಿಕೊಳ್ಳಲು ಭಕ್ತ ಸಮೂಹವೇ ಸೇರುತ್ತದೆ . ನಂತರ ಸಣ್ಣ ರಥೋತ್ಸವ, ಕೆರೆ
ಆಯನ ನಡೆದು ಏಪ್ರಿಲ್ 17ರಂದು ಬೆಳಿಗ್ಗೆ ದರ್ಶನ ಬಲಿ, ಬಟ್ಟಲು ಕಾಣಿಕೆಯಾಗಿ ರಾತ್ರಿ ಪುತ್ತೂರು ಬೆಡಿ ಪ್ರದರ್ಶನ. ನಂತರ ದೇವರ ಬ್ರಹ್ಮ ರಥೋತ್ಸವ ನಡೆಯುತ್ತದೆ. ದೇವರು ಬ್ರಹ್ಮರಥದಿಂದ ಇಳಿದು ಬಂದ ನಂತರ ದೈವಗಳೊಂದಿಗೆ ಕಟ್ಟೆ ಸವಾರಿ ನಡೆದು ದೈವಗಳು ಬಲ್ನಾಡಿನೆಡೆ ಹೆಜ್ಜೆ ಹಾಕಿದರೆ, ದೇವರು ಪೇಟೆ ಸವಾರಿ ಮುಂದುವರಿಸುತ್ತಾರೆ. ಮರುದಿನ ಅಂದರೆ ಏಪ್ರಿಲ್ 18ರಂದು ಸಂಜೆ ಅಂಗಳತ್ತಾಯ ಎಂಬ ದೈವವನ್ನು ಕರೆದು, ದೇವಾಲಯದ ರಕ್ಷಣೆ ವಹಿಸಿ ದೇವರು ಅವಭೃತ ಸ್ನಾನಕ್ಕೆ ವೀರಮಂಗಲದೆಡೆ ಸಾಗುತ್ತಾರೆ. ಮರುದಿನ ಬೆಳಿಗ್ಗೆ ಸ್ನಾನ ಮುಗಿಸಿ ದೇವಸ್ಥಾನಕ್ಕೆ ದೇವರು ಆಗಮಿಸುವುದರೊಂದಿಗೆ ಧ್ವಜ ಆರೋಹಣ ನಡೆದು ಜಾತ್ರೆಗೆ ತೆರೆ ಬೀಳುತ್ತದೆ.
ಈ ಬಾರಿ ಭಕ್ತರ ಮನೆಮನದಲ್ಲಿ ನೆಲೆಗೊಂಡಿರುವ ಆರಾಧ್ಯ ದೈವ ಅವರ ಹೃದಯ ಮಂದಿರದಲ್ಲಿ ಪೂಜೆಗೊಳಗಾಗುತ್ತಿದ್ದಾನೆ. ಬಂದಿರುವ ಕಷ್ಟವನ್ನು ಪರಿಹರಿಸಿ ಸರ್ವರನ್ನೂ ಶ್ರೀ ಮಹಾಲಿಂಗೇಶ್ವರ ಸಲಹಲಿ ಎಂದು ಈ ಸಂದರ್ಭದಲ್ಲಿ ನಾವೆಲ್ಲರೂ ಪ್ರಾರ್ಥಿಸೋಣ…

Tags: Lord MahalingeshwaraPuttur
ShareTweetSendShare
Join us on:

Related Posts

ಮೂರು ಅಡಿ ಕಟೌಟ್ ರವಿಕುಮಾರ್, ಯತ್ನಾಳ್, ಪ್ರತಾಪ್ ಸಿಂಹ ಜೊತೆಗೆ ಬನ್ನಿ;ಹೆಚ್ಚಿನ ಚಿಕಿತ್ಸೆಗೆ ಸಿಎಂ ಪರಿಹಾರ ನಿಧಿಯಿಂದ ಹಣ ಕೊಡಿಸುವೆ: ಪ್ರದೀಪ್ ಈಶ್ವರ್

ನನಗೊಂದು ಇಲಾಖೆ ಕೊಟ್ಟು ನೋಡಿ ಕೆಲಸ ಮಾಡಿ ತೋರಿಸ್ತೀನಿ: ಮಂತ್ರಿಸ್ಥಾನದ ಆಸೆ ಬಿಚ್ಚಿಟ್ಟ ಶಾಸಕ ಪ್ರದೀಪ್ ಈಶ್ವರ್

by Shwetha
September 29, 2026
0

ಚಿಕ್ಕಬಳ್ಳಾಪುರ: ಸದಾ ತಮ್ಮ ವಿಭಿನ್ನ ಶೈಲಿಯ ಮಾತುಗಳಿಂದಲೇ ಸುದ್ದಿಯಲ್ಲಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಈಗ ಬಹಿರಂಗವಾಗಿಯೇ ಮಂತ್ರಿಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಸುಧಾರಣಾ ಉಪ ಸಮಿತಿಗೆ...

ಉಳ್ಳವರಿಗೆ ಗ್ಯಾರಂಟಿ ರದ್ದು ಮಾಡಬೇಕಾ, ಬಡವರಿಗೆ ಮಾತ್ರ ಭಾಗ್ಯ ಸೀಮಿತವಾಗಲಿ: ಬಿಜೆಪಿ ಶಾಸಕರ ಪ್ರಸ್ತಾವನೆಗೆ ಡಿಕೆಶಿ ಖಡಕ್ ಕೌಂಟರ್

ಬರ ಪರಿಸ್ಥಿತಿ, ಕಸ್ತೂರಿರಂಗನ್ ವರದಿ ಕುರಿತು ಸರ್ವಪಕ್ಷ ಸಭೆಗೆ ಡಿಕೆಶಿ ಕರೆ

by Shwetha
September 29, 2026
0

ರಾಜ್ಯದಲ್ಲಿನ ಬರ ಪರಿಸ್ಥಿತಿ ಹಾಗೂ ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದ ಕಸ್ತೂರಿರಂಗನ್ ವರದಿ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ಕರೆಯುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ....

KPSC- ಪ್ರಿಯಾಂಕ್ ಖರ್ಗೆ ಗೆ DK ಶ್ರೀರಕ್ಷೆ:ಅಕ್ರಮ ಮಾಡಿಲ್ಲದಿದ್ದರೆ ಇಡಿ ಬಗ್ಗೆ ನಡುಕವೇಕೆ?ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿರುವ ಸಿಎಂ

KPSC- ಪ್ರಿಯಾಂಕ್ ಖರ್ಗೆ ಗೆ DK ಶ್ರೀರಕ್ಷೆ:ಅಕ್ರಮ ಮಾಡಿಲ್ಲದಿದ್ದರೆ ಇಡಿ ಬಗ್ಗೆ ನಡುಕವೇಕೆ?ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿರುವ ಸಿಎಂ

by Shwetha
September 29, 2026
0

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಪ್ರಕ್ರಿಯೆಯಲ್ಲಿ ಸರಣಿ ಅಕ್ರಮಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪಗಳ ನಡುವೆಯೇ, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ...

ಬಿಜೆಪಿ ಜತೆ ರಾಜಿಯಾಗಿದ್ದರೆ ಡಿಕೆಶಿ ಇವತ್ತು ಬೇರೆ ಲೆವೆಲ್ ನಲ್ಲೇ ಇರುತ್ತಿದ್ದರು: ಹೈಕಮಾಂಡ್ ಗೆ ಖಡಕ್ ಸಂದೇಶ ರವಾನಿಸಿದ ಬಾಲಕೃಷ್ಣ

ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆ ಬಗ್ಗೆ ಸಚಿವರ ಹೇಳಿಕೆ: ಸರ್ಕಾರದೊಳಗೂ ಚರ್ಚೆ

by Shwetha
September 29, 2026
0

ಕರ್ನಾಟಕದ ಐದು ಗ್ಯಾರಂಟಿ ಯೋಜನೆಗಳ ಆರ್ಥಿಕ ಪರಿಣಾಮದ ಕುರಿತು ರಾಜ್ಯ ಸರ್ಕಾರದೊಳಗೇ ಚರ್ಚೆ ತೀವ್ರಗೊಂಡಿದೆ. ಇತ್ತೀಚೆಗೆ ಸಚಿವ ಎಚ್.ಸಿ. ಬಾಲಕೃಷ್ಣ ಅವರು, ಗ್ಯಾರಂಟಿ ಯೋಜನೆಗಳು ಇಲ್ಲದಿದ್ದರೆ ಸರ್ಕಾರದ...

ಬಜೆಟ್ ಭಾರಕ್ಕೆ ನಲುಗಿದ DK ಸರ್ಕಾರ ಗ್ಯಾರಂಟಿ ನಿಯಮಗಳಲ್ಲಿ  ಬದಲಾವಣೆ ತರುವ ಸುಳಿವು ನೀಡಿದ CM ಡಿ ಕೆ ಶಿವಕುಮಾರ್

ಬಜೆಟ್ ಭಾರಕ್ಕೆ ನಲುಗಿದ DK ಸರ್ಕಾರ ಗ್ಯಾರಂಟಿ ನಿಯಮಗಳಲ್ಲಿ ಬದಲಾವಣೆ ತರುವ ಸುಳಿವು ನೀಡಿದ CM ಡಿ ಕೆ ಶಿವಕುಮಾರ್

by Shwetha
September 29, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಐದು ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯ ಕುರಿತು ಕೊನೆಗೂ ಸರ್ಕಾರ ಮೌನ ಮುರಿದಿದೆ. ಇದುವರೆಗೂ ವಿರೋಧ ಪಕ್ಷಗಳು ಮಾಡುತ್ತಿದ್ದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram