ಬೆಂಗಳೂರು: ದಿನದಿಂದ ದಿನಕ್ಕೆ ಚಿನ್ನದ ದರ ಏರಿಕೆ ಕಾಣುತ್ತಿದ್ದು, ಬಂಗಾರ ಪ್ರಿಯರಿಗೆ ನೋವಾಗುವಂತಾಗುತ್ತಿದೆ. ಈ ಸಂದರ್ಭದಲ್ಲಿ ಮದುವೆ ಹೆಚ್ಚಾಗಿರುತ್ತವೆ. ಹೀಗಾಗಿ ಜನರು ಮತ್ತಷ್ಟು ಕಂಗಾಲಾಗಿದ್ದಾರೆ.
ಬಡವರು ಹಾಗೂ ಮಧ್ಯಮ ಪಾಲಿನ ಜನರಿಗೆ ಗಗನ ಕುಸುಮವಾಗಿದೆ. ಇದು ಇತಿಹಾಸದಲ್ಲಿಯೇ ದಾಖಲೆ ದರ ಎನ್ನಲಾಗುತ್ತಿದೆ. ಚಿನ್ನದ ಬೆಲೆ 67 ಸಾವಿರದ ಗಡಿ ದಾಟಿದ್ದು, ಬೆಳ್ಳಿ 75 ಸಾವಿರ ಕ್ರಾಸ್ ಮಾಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ
24 ಕ್ಯಾರೆಟ್ 10 ಗ್ರಾಂ ಚಿನ್ನ- 67,800 ರೂ., 22 ಕ್ಯಾರೆಟ್ 10 ಗ್ರಾಂ ಚಿನ್ನ- 61,100 ರೂ., 1 ಕೆ.ಜಿ ಬೆಳ್ಳಿ- 75,000 ರೂ. ಇದೆ.
ಈ ದರ ಮಾರುಕಟ್ಟೆಯಲ್ಲಿಯೇ ಅತೀ ಹೆಚ್ಚು ದಾಖಲಾಗಿರುವ ದರವಾಗಿದೆ. ಹಿಂದೆ ಯಾವತ್ತೂ ಈ ದರಕ್ಕೆ ಬಂಗಾರ ಬಂದಿರಲಿಲ್ಲ. ಅಮೆರಿಕ ಡಾಲರ್ ದುರ್ಬಲವಾಗಿರುವುದು.ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಬಂಗಾರದ ಮೇಲೆ ಇನ್ವೆಸ್ಟ್ ಮಾಡುತ್ತಿರುವುದು ಕೂಡ ದರ ಏರಿಕೆಗೆ ಕಾರಣವಾಗಿದೆ. ಆದರೆ, ಬಂಗಾರ ಪ್ರಿಯರಿಗೆ ಮಾತ್ರ ಬರ ಬೀಳುವಂತಾಗಿದೆ.