HOCKEY WORLD CUP 2023 : ಭಾರತ-ಸ್ಪೇನ್ ನಡುವೆ ಕಾದಾಟ
ಇಂದಿನಿಂದ ಹಾಕಿ ವಿಶ್ವಕಪ್ ಆರಂಭವಾಗಲಿದೆ. ಕಳಿಂಗದ, ಬಿರ್ಸಾ ಮುಂಡಾದಲ್ಲಿ ಮೊದಲ ಪಂದ್ಯ ನಡೆಯಲಿದೆ. ವಿಶ್ವದ 16 ತಂಡಗಳು ಭಾಗವಹಿಸುವ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಜ್ಜಾಗುತ್ತಿವೆ. ಪ್ರೇಕ್ಷಕರೂ ಪಂದ್ಯದ ರೋಚಕತೆ ಕಣ್ಣು ತುಂಬಿಕೊಳ್ಳಲು ಕಾತುರಾಗಿದ್ದಾರೆ.
ಇಂದು ಸಂಜೆ ನಡೆಯಲಿರುವ ಪಂದ್ಯದಲ್ಲಿ ಭಾರತ, ಸ್ಪೇನ್ ತಂಡಗಳು ಕಾದಾಟ ನಡೆಸಲಿವೆ. ವಿಶ್ವ ರ್ಯಾಂಕಿಂಗ್ ನಲ್ಲಿ 6ನೇ ಸ್ಥಾನದಲ್ಲಿರುವ ಭಾರತ ಪ್ರಸ್ತುತ 8ನೇ ಸ್ಥಾನದಲ್ಲಿರುವ ಸ್ಪೇನ್ ವಿರುದ್ಧ ಸೆಣಸಲಿದೆ. ಸ್ಪೇನ್ ತಂಡ ಬಲಾಢ್ಯವಾಗಿದೆ. ಭಾರತ, ಸ್ಪೇನ್, ವೇಲ್ಸ್ ಮತ್ತು ಗ್ರೇಟ್ ಬ್ರಿಟನ್ ಡಿ ಗುಂಪಿನಲ್ಲಿದೆ.
ಭಾರತ ಮತ್ತು ಸ್ಪೇನ್ 2022 ರಲ್ಲಿ ನಾಲ್ಕು ಬಾರಿ ಮುಖಾಮುಖಿಯಾಗಿದ್ದವು, ರೆಡ್ ಸ್ಟಿಕ್ಸ್ 2 ಬಾರಿ ಗೆದ್ದರೆ ಭಾರತ ಒಂದು ಬಾರಿ ಗೆದ್ದಿದೆ. ಅಂತಾರಾಷ್ಟ್ರೀಯ ಹಾಕಿಯಲ್ಲಿ ಉಭಯ ತಂಡಗಳು ಒಟ್ಟು 67 ಬಾರಿ ಮುಖಾಮುಖಿಯಾಗಿದ್ದು, ಭಾರತ 28 ಬಾರಿ ಗೆದ್ದಿದ್ದರೆ, ಸ್ಪೇನ್ 25 ಬಾರಿ ಗೆದ್ದಿದೆ. 14 ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ.
ಮುಂದಿನ ಸುತ್ತಿಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಭಾರತ ಉತ್ತಮ ಆಟ ಆರಂಭಿಸಬೇಕಿದೆ. 48 ವರ್ಷಗಳಲ್ಲಿ ಭಾರತ ಈ ಟೂರ್ನಿಯನ್ನು ಪ್ರಶಸ್ತಿ ಗೆದ್ದಿಲ್ಲ. ಭಾರತ ಕೊನೆಯ ಬಾರಿಗೆ 1975 ರಲ್ಲಿ ಹಾಕಿ ವಿಶ್ವಕಪ್ ಗೆದ್ದಿತ್ತು. ಭಾರತ ಗೆಲುವಿನ ಆರಂಭವನ್ನು ಮಾಡುವ ಕನಸಿನಲ್ಲಿದೆ.