Hockey World Cup : ಭಾರತ , ಇಂಗ್ಲೆಂಡ್ ಕದನ ಡ್ರಾನಲ್ಲಿ ಅಂತ್ಯ..!!
ತೀವ್ರ ಕುತೂಹಲ ಕೆರೆಳಿಸಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ವಿಶ್ವಕಪ್ ಪಂದ್ಯ 0-0 ರೋಚಕ ಡ್ರಾನಲ್ಲಿ ಅಂತ್ಯ ಕಂಡಿದೆ. ಇದರೊಂದಿಗೆ ಭಾರತ ಕ್ವಾರ್ಟರ್ ಫೈನಲ್ ಪಂದ್ಯದ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಇಲ್ಲಿನ ಬಿರ್ಸಾ ಮುಂಡಾ ಮೈದಾನದಲ್ಲಿ ನಡೆದ ಡಿ ಗುಂಪಿನ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಗೋಲಿಲ್ಲದೇ ಸಮಬಲದ ಫಲಿತಾಂಶ ಪಡೆದವು.
ಇಂಗ್ಲೆಂಡ್ ತಂಡ 8 ಪೆನಾಲ್ಟಿ ಅವಕಾಶ ಪಡೆಯಿತು. ಭಾರತ 4 ಪೆನಾಲ್ಟಿ ಅವಕಾಶವನ್ನು ಪಡೆಯಿತು. ಹರ್ಮನ್ಪ್ರೀತ್ ನೇತೃತ್ವದ ಭಾರತದ ತಂಡದ ರಕ್ಷಣ ಕ್ಷೇತ್ರ ಮತ್ತೊಮ್ಮೆ ತನ್ನ ತಾಕತ್ತನ್ನು ಪ್ರದರ್ಶಿಸಿತು.
ಭಾರತ ಮತ್ತು ಇಂಗ್ಲೆಂಡ್ ತಂಡಗಳು 2 ಪಂದ್ಯಗಳಿಂದ ತಲಾ 4 ಅಂಕಗಳನ್ನು ಪಡೆದುಕೊಂಡಿವೆ. ಎ.19ರಂದು ವೇಲ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಭಾರತ ವೇಲ್ಸ್ ತಂಡದ ವಿರುದ್ಧ ಗೆಲ್ಲಲೇ ಬೇಕಾಗಿದ್ದು ಕ್ವಾರ್ಟರ್ ಫೈನಲ್ ಹಂತವನ್ನು ಖಚಿತಪಡಿಸಿಕೊಳ್ಳಬೇಕಾಗಿದೆ. ಇಂಗ್ಲೆಂಡ್ ತಂಡ ವಿಶ್ವದ 8ನೇ ರ್ಯಾಂಕ್ ತಂಡ ಸ್ಪೇನ್ ತಂಡವನ್ನು ಎದುರಿಸಲಿದೆ.
`ಭಾರತ ತಂಡ ಪಂದ್ಯ ಆರಂಭದಲ್ಲೆ ಭಾರತ ಆಂಗ್ಲರ ಮೇಲೆ ಒತ್ತಡ ಹಾಕಿತು. ಮೊದಲ ಕ್ವಾರ್ಟರ್ನಲ್ಲಿ ಯಾವುದೇ ಗೊಲುಗಳು ದಾಖಲಾಗಲಿಲ್ಲ.
ಭಾರತ ಈ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿತು. 16, 20ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶವನ್ನು ಬಳಸಿಕೊಳ್ಳಲಿಲ್ಲ.
24ನೇ ನಿಮಿಷದಲ್ಲಿ ಹಾರ್ದಿಕ್ ಹೊಡೆದ ರಿವರ್ಸ್ ಹೊಡೆತವನ್ನು ಇಂಗ್ಲೆಂಡ್ ಗೋಲ್ ಕೀಪರ್ ವಿಸ್ಕರ್ ರೋಚಕವಾಗಿ ತಡೆದರು.
ಮೂರನೆ ಕ್ವಾರ್ಟರ್ನ 38ನೇ ನಿಮಿಷದಲ್ಲಿ ಭಾರತಕ್ಕೆ ಗೋಲು ಹೊಡೆಯಲು ಅವಕಾಶವಿತ್ತುಘಿಆದರೆ ಯಶಸ್ವಿಯಾಗಲಿಲ್ಲ. 39ನೇ ನಿಮಿಷದಲ್ಲಿ ಇಂಗ್ಲೆಂಡ್ ತಂಡದ ವಾರ್ಡ್ ಚೆಂಡನ್ನು ಗೋಲ್ಪೆಪೋಸ್ಟ್ನಿಂದ ಹೊರಗೆ ಹೊಡೆದು ನಿರಾಸೆ ಅನುಭವಿಸಿದರು.
45ನೇ ನಿಮಿಷದಲ್ಲಿ ಮನ್ದೀಪ್ ಗೋಲು ಹೊಡೆದರು ಆದರೆ ಫೌಲ್ ಎಂದು ರೆಫರಿ ನಿರ್ಧಾರಕ್ಕೆ ಬಂದರು.3ನೇ ಕ್ವಾರ್ಟರ್ನಲ್ಲೂ ಗೋಲು ದಾಖಲಾಗಲಿಲ್ಲ.
ನಾಲ್ಕನೆ ಮತ್ತು ಅಂತಿಮ ಕ್ವಾರ್ಟರ್ನಲ್ಲಿ ಭಾರತ ಆಂಗ್ಲರ ಮೇಲೆ ಮತ್ತೆ ಒತ್ತಡ ಹಾಕಿತು. ರೋಚಕ ಪಂದ್ಯ ವೀಕ್ಷಿಸಲು 21 ಸಾವಿರ ಅಭಿಮಾನಿಗಳು ಹಾಜರಿದ್ದರು.