ರಾಜ್ಯದಲ್ಲಿ ಈ ಬಾರಿ ಹೋಳಿ ಹಬ್ಬ ಆಚರಣೆ ಮಾಡಂಗಿಲ್ಲ..!
ಬೆಂಗಳೂರು : ದೇಶ ಹಾಗೂ ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಹಾವಳಿ ಮತ್ತೆ ಹೆಚ್ಚಾಗುತ್ತಲೇ ಇದೆ. 2ನೇ ಅಲೆ ಜೋರಾಗಿದ್ದು, ಮತ್ತೆ ಲಾಕ್ ಡೌನ್ ಆಗುತ್ತಾ ಎನ್ನುವಂತಹ ಪರಿಸ್ಥಿತಿ ಎದುರಾಗಿದೆ. ಈ ನಡುವೆ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಹಲವಾರು ಕ್ರಮಗಳನ್ನ ತೆಗೆದುಕೊಳ್ತಿದೆ.
ಇದರ ಬೆನ್ನಲ್ಲೇ ಈ ಬಾರಿ ಹೋಳಿ ಸಂಭ್ರಮಕ್ಕೂ ಬ್ರೇಕ್ ಬಿದ್ದಿದೆ. ಹೌದು ಹೋಳಿ ಹಬ್ಬದ ಸಂಭ್ರಮಾಚರಣೆಗೆ ಬ್ರೇಕ್ ಹಾಕಲು ಸರ್ಕಾರ ಚಿಂತನೆ ನಡೆಸಿದೆ. ಸಾರ್ವಜನಿಕವಾಗಿ ಹೋಳಿ ಆಚರಣೆ ಮಾಡಿದರೆ ಕೊರೊನಾ ಕೇಸಸ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಹಾಗಾಗಿ ಹೋಳಿ ಆಚರಣೆಗೆ ಬ್ರೇಕ್ ಹಾಕಲು ಮುಂದಾಗಿದೆ ಸರ್ಕಾರ.
ಬ್ರೆಜಿಲ್ ನಲ್ಲಿ ಕೊರೊನಾ ಮರಣ ಮೃದಂಗ : ಒಂದೇ ದಿನ 3251 ಜನ ಬಲಿ..!
ಉತ್ತರಾಖಂಡ ಹಿಮಪ್ರವಾಹ : ನಾಪತ್ತೆಯಾದ 130 ಮಂದಿ ಇನ್ನೂ ಸಿಕ್ಕಿಲ್ಲ..!