ಕಾಲಿವುಡ್ ಸ್ಟಾರ್ ನಿರ್ದೇಶಕಿಯ ಚಿತ್ರಕ್ಕೆ “ಹೊಂಬಾಳೆ” ಬಂಡವಾಳ
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿ ಫ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ದೇಶ-ವಿದೇಶದಲ್ಲೂ ಸಂಚಲನ ಮೂಡಿಸುತ್ತಿದೆ. ಈ ಚಿತ್ರಕ್ಕೆ ಸೌತ್ ಇಂಡಸ್ಟ್ರಿಯಿಂದ ಘಟಾನುಗಟಿಗಳು ಹಾಡಿ ಹೊಗಳಿದ್ದಾರೆ. ತಲೈವಾ ರಜಿನಿಕಾಂತ ಕನ್ನಡದಲ್ಲಿ ಚಿತ್ರ ನೋಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಕೆಜಿಎಫ್ ಚಾಪ್ಟರ್ 2 ಮೂಲಕ ಸೌಂಡ್ ನಲ್ಲಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಈಗ ಮತ್ತೊಂದು ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದೆ. ವಿಶೇಷವೆಂದರೆ ಈ ಸಂಸ್ಥೆ, ಹೊಸ ಚಿತ್ರವನ್ನು ನಿರ್ದೇಶಿಸಲು ನಿರ್ದೇಶಕಿ ಸುಧಾ ಕೊಂಗರ ಅವರಿಗೆ ಮಣೆ ಹಾಕಿದ್ದಾರೆ.
ಹೌದು ಈ ಬಾರಿ ʻಹೊಂಬಾಳೆ ಫಿಲ್ಮ್ಸ್ʼ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ದೇಶನ ಮಾಡುವ ಅವಕಾಶವನ್ನು ಕಾಲಿವುಡ್ ಲೇಡಿ ನಿರ್ದೇಶಕಿ ಸುಧಾ ಕೊಂಗರ ಗಿಟ್ಟಿಸಿಕೊಂಡಿದ್ದಾರೆ. ಮತ್ತೊಂದು ವಿಶೇಷ ಅಂದ್ರೆ, ನಿರ್ದೇಶಕಿ ಸುಧಾ ಕೊಂಗರ ಅವರು ಮೂಲತಃ ಆಂಧ್ರ ಪ್ರದೇಶದವರಾಗಿದ್ದು, ಅವರು ತಮಿಳು ಸಿನಿಮಾರಂಗದಲ್ಲಿ ಸಾಧನೆ ಮಾಡಿದ್ದಾರೆ. ಡಿಫರೆಂಟ್ ಸಬ್‌ಜೆಕ್ಟ್ ಗಳ ಮೂಲಕ ಸಿನಿಮಾಗಳನ್ನು ತೆರೆಯ ಮೇಲೆ ತೋರಿಸುವಲ್ಲಿ ಸೈ ಎನಿಸಿಕೊಂಡಿದ್ದಾರೆ. ಈ ಹಿಂದೆ ಸೂರ್ಯ ನಟನೆಯ `ಸೂರರೈ ಪೋಟ್ರು’ ನಿರ್ದೇಶನ ಮಾಡಿ ಗಮನ ಸೆಳೆದಿದ್ದರು.
https://twitter.com/hombalefilms/status/1517015020046929920?ref_src=twsrc%5Etfw%7Ctwcamp%5Etweetembed%7Ctwterm%5E1517015020046929920%7Ctwgr%5E%7Ctwcon%5Es1_&ref_url=https%3A%2F%2Fpublictv.in%2Fkgf-chapter-2-makers-hombale-films-announces-new-movie-with-soorarai-pottru-lady-director-sudha-kongara%2F
ಕಾಲಿವುಡ್ ಪ್ರತಿಭಾವಂತ ನಿರ್ದೇಶಕಿ ಸುಧಾ ಕೊಂಗರ ಅವರ ಕೆಲಸ ಗುರುತಿಸಿ ಇದೀಗ ಹೊಂಬಾಳೆ ಸಂಸ್ಥೆಯಡಿ ನಿರ್ದೇಶನ ಮಾಡುವ ಅವಕಾಶವನ್ನು ಕೊಟ್ಟಿದ್ದಾರೆ. ಹಾಗಂತ ಅಧಿಕೃತವಾಗಿ `ಹೊಂಬಾಳೆ ಫಿಲ್ಮ್ಸ್ʼ ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ. ಸುಧಾ ಕೊಂಗರ ಅವರಿಗೆ `ಹೊಂಬಾಳೆ ಫಿಲ್ಮ್ಸ್’ ಮೂಲಕ ವಿಜಯ್ ಕಿರಗಂದೂರು ಸಾಥ್ ನೀಡಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.