ರಾಷ್ಟ್ರ ರಾಜಧಾನಿಯಲ್ಲಿ ಇನ್ಮುಂದೆ ಮದ್ಯ ಹೋಂ ಡೆಲಿವರಿ
ನವದೆಹಲಿ: ದೇಶದಲ್ಲಿ ಕೋವಿಡ್ ಹಾವಳಿ ಅಧಿಕವಾಗಿರುವ ರಾಜ್ಯಗಳ ಪೈಕಿ ರಾಷ್ಟ್ರ ರಾಜದಾನಿ ದೆಹಲಿ ಸಹ ಒಂದು. ಈ ನಡುವೆ ಕಠಿಣ ಕೋವಿಡ್ ನಿರ್ಬಂಧನೆಗಳನ್ನ ಹೇರಿರುವ ರಾಜ್ಯ ಸರ್ಕಾರ ಹೊಸ ಹೊಸ ಕ್ರಮಗಳನ್ನ ಕೈಗೊಳ್ಳುತ್ತಿದೆ.. ಇದೀಗ ಮದ್ಯ ಮತ್ತು ವಿದೇಶಿ ಮದ್ಯಗಳನ್ನು ಹೋಂ ಡೆಲಿವರಿ ಮಾಡಲು ದೆಹಲಿ ಸರ್ಕಾರ ಅನುಮತಿ ನೀಡಿದೆ. ಹೌದು ದೆಹಲಿಯ ಹೊಸ ಅಬಕಾರಿ ನಿಯಮಗಳ ಅನುಗುಣವಾಗಿ ಆನ್‍ಲೈನ್ ಹಾಗೂ ಪೋರ್ಟಲ್‍ಗಳ ಮೂಲಕ ಮದ್ಯವನ್ನು ಆರ್ಡರ್ ಮಾಡಿ ಹೋಂ ಡೆಲಿವರಿ ಪಡೆಯಬಹುದು ಎಂದು ತಿಳಿಸಲಾಗಿದೆ. ಈ ಹಿಂದೆ ಕೂಡ ಮದ್ಯವನ್ನು ಹೋಂ ಡೆಲಿವರಿ ನೀಡಲಾಗುತ್ತಿತ್ತು. ಆದರೆ ಎಲ್-13 ಪರವಾನಗಿ ಹೊಂದಿದವವರಿಗೆ ಮಾತ್ರ ಹೋಂ ಡೆಲಿವರಿ ಮಾಡಲಾಗುತ್ತಿತ್ತು. ಅದರಂತೆ ಈ ಬಾರಿ ಹೊಸ ಅಬಕಾರಿ ನಿಯಮಗಳ ಪ್ರಕಾರ ಎಲ್-14 ಪರವನಾಗಿ ಹೊಂದಿರುವವರಿಗೆ ಮಾತ್ರ ದೆಹಲಿಯಲ್ಲಿ ಮದ್ಯವನ್ನು ಹೋಂ ಡೆಲಿವರಿ ಮಾಡಲು ಅವಕಾಶ ನೀಡಲಾಗಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.