ಸುಟ್ಟಗಾಯಗಳ ನೋವಿಗೆ ಮತ್ತು ‌ಕಲೆಗಳ ನಿವಾರಣೆಗೆ ಪರಿಣಾಮಕಾರಿ ಮನೆಮದ್ದುಗಳು

1 min read
Saakshatv healthtips remedies burns

ಸುಟ್ಟಗಾಯಗಳ ನೋವಿಗೆ ಮತ್ತು ‌ಕಲೆಗಳ ನಿವಾರಣೆಗೆ ಪರಿಣಾಮಕಾರಿ ಮನೆಮದ್ದುಗಳು Saakshatv healthtips remedies burns

ಅಡಿಗೆ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಕೈ ಸುಡುವುದು ಅಥವಾ ಬಿಸಿ ಪದಾರ್ಥಗಳಿಂದ ಸುಟ್ಟಗಾಯಗಳು ಉಂಟಾಗುವುದು ಸಾಮಾನ್ಯ. ಸಣ್ಣಪುಟ್ಟ ಸುಟ್ಟುಕೊಳ್ಳುವಿಕೆಯು ಕೂಡ ಬಹಳಷ್ಟು ನೋವನ್ನು ಉಂಟು ಮಾಡುತ್ತದೆ. Saakshatv healthtips remedies burns

ಸುಟ್ಟಗಾಯಗಳನ್ನು ಅವುಗಳ ತೀವ್ರತೆಯಿಂದ ವರ್ಗೀಕರಿಸಲಾಗುತ್ತದೆ. ‌ಮೊದಲ ಹಂತದ ಸುಟ್ಟಗಾಯಗಳನ್ನು ಕಡಿಮೆ ತೀವ್ರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ಚರ್ಮದ ಹೊರ ಪದರದ ಮೇಲೆ ಮಾತ್ರ ಪರಿಣಾಮ ಬೀರುತ್ತದೆ.
ಎರಡನೇ ಹಂತದ ಸುಡುವಿಕೆಯು ಚರ್ಮದ ಆಳವಾದ ಪದರಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಗುಳ್ಳೆಗಳ ಉಂಟುಮಾಡುತ್ತದೆ.

Saakshatv healthtips remedies burns
ಮೂರನೇ ಹಂತದ ಸುಡುವಿಕೆಯು ಚರ್ಮದ ಎಲ್ಲಾ ಪದರಗಳಿಗೆ ಹಾನಿಯನ್ನುಂಟುಮಾಡುತ್ತದೆ.
ಆದರೆ ನಾಲ್ಕನೇ ಹಂತದ ಸುಟ್ಟಗಾಯಗಳು ಕೀಲುಗಳು ಮತ್ತು ಮೂಳೆಗಳನ್ನು ಒಳಗೊಂಡಿರಬಹುದು. ಮೂರನೇ ಮತ್ತು ನಾಲ್ಕನೇ ಹಂತದ ಸುಟ್ಟಗಾಯಗಳನ್ನು ವೈದ್ಯಕೀಯ ತುರ್ತುಸ್ಥಿತಿ ಎಂದು ಪರಿಗಣಿಸಲಾಗುತ್ತದೆ ಮತ್ತು ಇದಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ನೀವು ಮನೆಯಲ್ಲಿ ಪ್ರಥಮ ದರ್ಜೆಯ ಸುಟ್ಟಗಾಯಗಳು ಮತ್ತು ಎರಡನೇ ಹಂತದ ಸುಟ್ಟಗಾಯಗಳಿಗೆ ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಕೆಲವು ಮನೆಮದ್ದುಗಳು ಸಹಾಯ ಮಾಡುತ್ತದೆ.

ನಿಂಬೆ ಮತ್ತು ಟೊಮೆಟೋ ರಸ

ನಿಂಬೆ ಮತ್ತು ಟೊಮೆಟೋ ರಸವು ಸುಟ್ಟ ಗಾಯಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಇದು ನಿಧಾನವಾಗಿ ಸುಟ್ಟ ಗಾಯದ ಮೇಲಿನ ಸತ್ತ ಚರ್ಮವನ್ನು ತೆಗೆದು, ಹೊಸ ಚರ್ಮದ ಹುಟ್ಟುವಿಕೆಗೆ ನೆರವಾಗುತ್ತದೆ. ನಿಂಬೆಯಲ್ಲಿರುವ ಆಸಿಡಿಕ್ ಗುಣ ಕಲೆ ನಿವಾರಕವಾಗಿ ಕೆಲಸ ಮಾಡುತ್ತದೆ. ತಾಜಾ ಟೊಮೆಟೋ ರಸ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ ಮತ್ತು ಸುಟ್ಟ ಕಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದನ್ನು ಬಳಸುವುದು ಹೇಗೆ ಎಂಬುದು ಇಲ್ಲಿದೆ ನೋಡಿ. ಸಹಜವಾದ ನೀರಿನಿಂದ ಸುಟ್ಟ ಗಾಯವನ್ನು ನಿಧಾನವಾಗಿ ತೊಳೆಯಿರಿ. ನಿಮಗೆ ಎರಡು ಸ್ವಚ್ಛವಾಗಿರುವ ಬಟ್ಟೆಗಳು ಬೇಕು.

ಬಳಸುವ ವಿಧಾನ
ಮೊದಲಿಗೆ ಸುಟ್ಟ ಗಾಯವನ್ನು ತಣ್ಣನೆಯ ನೀರಿನಿಂದ ಸುಟ್ಟ ಜಾಗವನ್ನು ಸ್ವಚ್ಛವಾದ ನೀರಿನಿಂದ ತೊಳೆಯಿರಿ.
ನಂತರ ಒಂದು ಸ್ವಚ್ಛವಾಗಿರುವ ಬಟ್ಟೆಯನ್ನು ತಾಜಾ ನಿಂಬೆಯ ರಸದಲ್ಲಿ ಮತ್ತು ಮತ್ತೊಂದು ಸ್ವಚ್ಛವಾಗಿರುವ ಬಟ್ಟೆಯನ್ನು ತಾಜಾ ಟೊಮೆಟೋ ರಸದಲ್ಲಿ ನೆನೆಸಿ.
ಸುಟ್ಟ ಗಾಯದ ಮೇಲೆ ನಿಂಬೆಯ ರಸದಲ್ಲಿ ‌ನೆನೆಸಿದ ಬಟ್ಟೆಯನ್ನು ನಿಧಾನವಾಗಿ ಇಟ್ಟು ಸ್ವಲ್ಪ ಸಮಯ ಹಾಗೆ ಬಿಡಿ.
ಅದು ಒಣಗಿದ ಬಳಿಕ ತಾಜಾ ಟೊಮೆಟೋ ರಸದಲ್ಲಿ ನೆನೆಸಿದ ಬಟ್ಟೆಯನ್ನು ಸುಟ್ಟ ಗಾಯದ ಮೇಲೆ ಇಡಿ. ಈ ವಿಧಾನವನ್ನು ದಿನಕ್ಕೆ ಎರಡು ಬಾರಿ ಪುನರಾವರ್ತಿಸಿ ಮತ್ತು ಗರಿಷ್ಟ ಮಟ್ಟದ ಬ್ಲೀಚಿಂಗ್ ಪರಿಣಾಮದಿಂದ ಸುಟ್ಟ ಗಾಯದ ಕಲೆಗಳು ಕೆಲವೇ ದಿನಗಳಲ್ಲಿ ಮಾಯವಾಗುತ್ತದೆ.
ಮೊಡವೆ ಕಲೆಗಳ ನಿವಾರಣೆಗೆ ಕೂಡ ನಿಂಬೆ ರಸವನ್ನು ಇದೇ ರೀತಿಯಾಗಿ ಬಳಸಬಹುದು.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆಯನ್ನು ನಿಧಾನವಾಗಿ ಕಲೆಯ ಮೇಲೆ ಮಸಾಜ್ ಮಾಡಿ. ಇದನ್ನು ದಿನಕ್ಕೆ ಎರಡು ಬಾರಿ ಅನುಸರಿಸುವುದರಿಂದ ಕಲೆಯನ್ನು ನಿವಾರಿಸಿಕೊಳ್ಳಬಹುದಾಗಿದೆ. ಬಾದಾಮಿ ಎಣ್ಣೆಯು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಕೂಡ ಉತ್ತಮವಾಗಿದೆ.

ಮೆಂತ್ಯೆ

ಸುಟ್ಟ ಕಲೆಗಳನ್ನು ನಿವಾರಿಸಲು ಮೆಂತ್ಯೆ ಕಾಳುಗಳು ಪರಿಣಾಮಕಾರಿಯಾಗಿದೆ . ಒಂದು ಇಡೀ ರಾತ್ರಿ ಮೆಂತ್ಯೆಯ ಕಾಳುಗಳನ್ನು ನೀರಿನಲ್ಲಿ ನೆನೆಸಿ. ಮರುದಿನ ಅದನ್ನು ಪೇಸ್ಟ್ ಮಾಡಿ. ಇದನ್ನು ಸುಟ್ಟ ಗಾಯದ ಮೇಲೆ ಹಚ್ಚಿ, ಸ್ವಲ್ಪ ಸಮಯದವರೆಗೆ ಹಾಗೆ ಬಿಡಿ.
ಮೆಂತ್ಯೆ ಪೇಸ್ಟ್ ಒಣಗಿದ ಬಳಿಕ ಅದನ್ನು ನೀರಿನಿಂದ ತೊಳೆಯಿರಿ. ಸುಟ್ಟ ಗಾಯದ ಕಲೆಯ ಮೇಲೆ ಇದನ್ನು ಆಗಾಗ್ಗೆ ಹಚ್ಚಿ. ತಣ್ಣನೆಯ ನೀರಿನ ಜೊತೆಗೆ ಅರಿಶಿನವನ್ನು ಬಳಸುವುದರಿಂದ ಕೂಡ ಸೋಂಕನ್ನು ನಿವಾರಿಸಬಹುದಾಗಿದೆ. ಕೂದಲು ಉದುರುವುದು, ತಲೆ ಹೊಟ್ಟು, ಮೊಡವೆ, ಚರ್ಮ ಸಂಬಂಧಿ ಸಮಸ್ಯೆಗಳು ಕೂಡ ಮೆಂತ್ಯೆ ಕಾಳುಗಳಿಂದ ನಿವಾರಣೆಯಾಗುತ್ತದೆ.

ಆಲೂಗಡ್ಡೆ ಸಿಪ್ಪೆಗಳು

ಪ್ರಾಚೀನ ಕಾಲದಿಂದ ಬಳಕೆಯಲ್ಲಿರುವ ಮತ್ತೊಂದು ವಿಧಾನವೆಂದರೆ ಆಲೂಗಡ್ಡೆ ಸಿಪ್ಪೆಯನ್ನು ಸುಟ್ಟ ಗಾಯಕ್ಕೆ ಬಳಸುವುದು. ಆಲೂಗಡ್ಡೆ ಸಿಪ್ಪೆಗಳಲ್ಲಿ ನೀರಿನಂಶವಿದ್ದು, ಇದರಲ್ಲಿನ ಆಂಟಿ ಬ್ಯಾಕ್ಟೀರಿಯಾ ಗುಣಗಳು ಸುಟ್ಟ ಗಾಯಗಳನ್ನು ಗುಣ ಮಾಡುವ ಶಕ್ತಿಯನ್ನು ಹೊಂದಿದೆ. ಇದು ಸಣ್ಣಪುಟ್ಟ ಗಾಯಗಳಿಗೆ ಉತ್ತಮ ಔಷಧಿಯಾಗಿದೆ. ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯಿರಿ. ಅದನ್ನು ಗಾಯವಿರುವ ಜಾಗದ ಮೇಲೆ ಹಚ್ಚಿ ಅಥವಾ ಆಲೂಗಡ್ಡೆಯ ಸಿಪ್ಪೆಯನ್ನು ಗಾಯಕ್ಕೆ ಸುತ್ತಿ ಬ್ಯಾಂಡೇಜ್ ತರ ಕೂಡ ಮಾಡಬಹುದು. ಇದರಿಂದ ಸುಟ್ಟ ಗಾಯಗಳ ನೋವು ಸಹ ನಿವಾರಣೆಯಾಗುತ್ತದೆ.
Saakshatv healthtips remedies burns

ಬಾರ್ಲಿ, ಅರಿಶಿನ ಮತ್ತು ಮೊಸರು
ಸುಟ್ಟ ಗಾಯಗಳಿಗೆ ಬಾರ್ಲಿ, ಅರಿಶಿನ ಮತ್ತು ಮೊಸರನ್ನು ಬಳಸುವುದು ಕೂಡ ಅತ್ಯುತ್ತಮ ಮನೆಮದ್ದಾಗಿದೆ. ಬಾರ್ಲಿ, ಅರಿಶಿನ ಮತ್ತು ಮೊಸರನ್ನು ಸಮ ಪ್ರಮಾಣದಲ್ಲಿ ಬೆರೆಸಿ ಪೇಸ್ಟ್ ತಯಾರಿಸಿ. ‌ಅದನ್ನು ಸುಟ್ಟ ಗಾಯವಾದ ಜಾಗಕ್ಕೆ ಹಚ್ಚುವುದರಿಂದ ನೋವು ನಿವಾರಣೆಯಾಗಿ ಗಾಯವೂ ವಾಸಿಯಾಗುತ್ತದೆ.

ಸೂಚನೆ : ಇಲ್ಲಿರುವ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ನೀಡಲಾಗಿದೆ.

ಆರೋಗ್ಯ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಗೂಗಲ್ ನಲ್ಲಿ saakshatv healthtips ಎಂದು ಸರ್ಚ್ ಮಾಡಿ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd