ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮನೆಮದ್ದು
ಮಂಗಳೂರು, ಜುಲೈ 21: ಭಾರತದಲ್ಲಿ ಕೋವಿಡ್-19 ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ನಾವು ಸೋಂಕುಗಳ ವಿರುದ್ಧ ನಮ್ಮನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಇದಕ್ಕಾಗಿ ನಿಯಮಿತವಾಗಿ ಸೋಪ್ ಮತ್ತು ನೀರಿನಿಂದ ಕೈ ತೊಳೆಯುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಮತ್ತು ಸರ್ಕಾರ ಕೊರೊನಾ ವಿರುದ್ಧ ಹೋರಾಡಲು ಸೂಚಿಸಿರುವ ಮಾರ್ಗಸೂಚಿಗಳನ್ನು ಅನುಸರಿಸುವುದು ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರ ಆದ್ಯ ಕರ್ತವ್ಯ.
ಹೆಚ್ಚುವರಿಯಾಗಿ, ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ದೈನಂದಿನ ಜೀವನದಲ್ಲಿ ನಾವು ಸೇರಿಸಿಕೊಳ್ಳಬಹುದಾದ ಕೆಲವು ಮನೆಮದ್ದುಗಳು ಇಲ್ಲಿವೆ. ನಮ್ಮ ಪ್ರಾಚೀನ ಕಾಲದಿಂದಲೂ ನಾವು ಚ್ಯವಾನ್‌ಪ್ರಶ್ ತಿನ್ನುವ ಅಭ್ಯಾಸ ಹೊಂದಿದ್ದೇವೆ. ಅಧಿಕ ರೋಗ ನಿರೋಧಕಗಳಿಂದ ಸಮೃದ್ಧವಾಗಿರುವ ಗಿಡಮೂಲಿಕೆಗಳಿಂದ ತಯಾರಿಸಿರುವ ಈ ಆಯುರ್ವೇದ ಲೇಹ್ಯದ ಒಂದು ಚಮಚವು ಅನೇಕರ ಜೀವನದಲ್ಲಿ ದಿನಚರಿಯಾಗಿದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದನ್ನು ಆಯುರ್ವೇದದಲ್ಲಿ ಔಷಧಿಯಾಗಿ ಪರಿಗಣಿಸಲಾಗುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಂತಹ ಹೆಚ್ಚಿನ ಮನೆಮದ್ದುಗಳ ಮಾಹಿತಿ ಇಲ್ಲಿದೆ.
ತುಳಸಿ ಶುಂಠಿ ಚಹಾ:
ಒಂದು ಲೀಟರ್ ನೀರನ್ನು ಕುದಿಸಿ, ಬಳಿಕ ಅದಕ್ಕೆ
1 ಚಮಚ ಒಣಗಿದ ಶುಂಠಿ,
4 ಟೀಸ್ಪೂನ್ ಕೊತ್ತಂಬರಿ ಬೀಜ,
1 ಟೀಸ್ಪೂನ್ ಕರಿಮೆಣಸು,
4 ಇಂಚಿನ ಗಿಲೋಯ್ ಸ್ಟಿಕ್ (ಅಮೃತ ಬಳ್ಳಿ) ಮತ್ತು
ಒಂದು ಮುಷ್ಟಿ ತಾಜಾ ತುಳಸಿ ಎಲೆಗಳನ್ನು ಸೇರಿಸಿ ನೀರನ್ನು ಕುದಿಸಿ. ಇದಕ್ಕೆ 1 ಚಮಚ ಜೇನುತುಪ್ಪ ಅಥವಾ ಬೆಲ್ಲವನ್ನು ಸೇರಿಸಿ ಕುಡಿಯಿರಿ.
ಬೆಳ್ಳುಳ್ಳಿ ಹಾಲು
1 ಕಪ್ ಹಾಲು
4 ಕಪ್ ನೀರು
3 ಎಸಳು ಬೆಳ್ಳುಳ್ಳಿ
ಸಣ್ಣ ತುಂಡು ದಾಲ್ಚಿನ್ನಿ (cinnamon)
ರುಚಿಗೆ ತಕ್ಕಷ್ಟು ಸಕ್ಕರೆ / ಜೇನು / ಬೆಲ್ಲ
ಮೂರು ಲವಂಗ
ಒಂದು ಲೋಟ ಹಾಲಿಗೆ ನಾಲ್ಕು ಗ್ಲಾಸ್ ನೀರು ಮಿಶ್ರಣ ಮಾಡಿ ಅದಕ್ಕೆ ಬೆಳ್ಳುಳ್ಳಿ ಎಸಳು, ದಾಲ್ಚಿನ್ನಿ, ಸೇರಿಸಿ ಒಂದು ಗ್ಲಾಸ್ ಗೆ ಬರುವವರೆಗೆ ಕುದಿಸಿ. ನಂತರ ಇದಕ್ಕೆ ಸಕ್ಕರೆ ಅಥವಾ ಜೇನು ಅಥವಾ ಬೆಲ್ಲ ಸೇರಿಸಿ ಕುಡಿಯಿರಿ. ಇದನ್ನು ಚಹಾ / ಕಾಫಿಗೆ ಬದಲಾಗಿ ಕುಡಿಯಬಹುದು
ಅರಿಶಿನ ಮಜ್ಜಿಗೆ:
1 ಟೀ ಚಮಚ ಅರಿಶಿನ ಪುಡಿ
1 ಚಿಟಿಕೆ ಇಂಗು (asafoetida)
1 ಟೀ ಚಮಚ ಮೆಂತೆ
1 ಟೀ ಚಮಚ ಸೋಂಪು
ಕೆಲವು ಕರಿಬೇವು ಎಲೆಗಳು ಮತ್ತು
500 ಮಿಲಿ ಮಜ್ಜಿಗೆ
ಕೆಲವು ಕರಿಬೇವಿನ ಎಲೆಗಳೊಂದಿಗೆ ಅರಿಶಿನ ಪುಡಿ, ಇಂಗು, ಮೆಂತ್ಯ ಮತ್ತು ಸೋಂಪು ಬೀಜಗಳನ್ನು ಐದು ನಿಮಿಷ ಬೆಚ್ಚಗಾಗಿಸಿ 500 ಮಿಲಿ ಮಜ್ಜಿಗೆಯಲ್ಲಿ ಸೇರಿಸಿ. ಪ್ರತಿದಿನ ಎರಡು ಅಥವಾ ಮೂರು ಬಾರಿ ಕುಡಿಯಿರಿ.
ನಮ್ಮ ಎಲ್ಲಾ ರೋಗನಿರೋಧಕ ಶಕ್ತಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುವ ಚಯಾಪಚಯ ಕ್ರಿಯೆಯಲ್ಲಿ ಈ ಎಲ್ಲಾ ಮಿಶ್ರಣ /ಕಷಾಯಗಳು ಕೆಲಸ ಮಾಡುತ್ತದೆ. ಇದಲ್ಲದೆ, ಮೇಲೋಗರ / ಉಪ್ಮಾ / ಪದಾರ್ಥ / ಸಾರಿಗೆ ಶುಂಠಿ-ಬೆಳ್ಳುಳ್ಳಿ-ಮೆಣಸಿನಕಾಯಿ ಪೇಸ್ಟ್ ಸೇರಿಸಿ. ಇದರಿಂದ ಶುದ್ಧೀಕರಣ ಕ್ರಿಯೆಗೆ ನಮ್ಮ ದೇಹದಲ್ಲಿ ಉತ್ತಮ ಜಲಸಂಚಯನ ಮಟ್ಟವನ್ನು ಕಾಪಾಡಿಕೊಳ್ಳಬಹುದು. ನಿಮ್ಮ ಪ್ರೋಬಯಾಟಿಕ್‌ಗಳ ಸೇವನೆಯನ್ನು ಹೆಚ್ಚಿಸಲು ದಿನದಲ್ಲಿ ಕನಿಷ್ಠ 2 ಬಾರಿಯ ಮೊಸರನ್ನು ಸೇವಿಸಿ.
ವೈರಸ್ ಕ್ರಿಯೆಯ ವಿರುದ್ಧ ವಿಟಮಿನ್ ಸಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ನಿಂಬೆ / ಕಿವಿ / ಕಿತ್ತಳೆ / ನೆಲ್ಲಿ ಕಾಯಿ ಸೇವನೆಯನ್ನು ಹೆಚ್ಚಿಸುವುದು ದೇಹದಲ್ಲಿನ ಈ ಪ್ರಮುಖ ವಿಟಮಿನ್ ಅಗತ್ಯವನ್ನು ಪೂರೈಸಲು ಉತ್ತಮ ಆಯ್ಕೆಗಳಾಗಿವೆ.
ಗುಣಪಡಿಸುವುದಕ್ಕಿಂತ ತಡೆಗಟ್ಟುವುದು ಉತ್ತಮ ಎಂಬ ಮಾತಿದೆ. ಆದ್ದರಿಂದ ನಿಮ್ಮ ಮತ್ತು ನಿಮ್ಮ ಕುಟುಂಬವನ್ನು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ, ಅನಗತ್ಯವಾಗಿ ಮನೆಯಿಂದ ಹೊರಗೆ ಹೋಗದೆ, ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಪಾಲಿಸುವುದರ ಜೊತೆಗೆ ನಮ್ಮ ದೈನಂದಿನ ಆಹಾರದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುವ ಮನೆಮದ್ದುಗಳನ್ನು ಸೇರಿಸಿಕೊಂಡು ಕೊರೋನಾ ಸೋಂಕಿನಿಂದ ದೂರವಿರೋಣ.