Hosakote : ಮಾತನಾಡಬೇಡ ಎಂದಿದ್ದಕ್ಕೆ ಮಹಿಳಾ ಲೆಕ್ಕಾಧಿಕಾರಿಯ ಕೊಲೆಗೈದ ಕ್ಯಾಬ್ ಚಾಲಕ….
ಮಾತನಾಡಬೇಡ ಎಂದಿದಕ್ಕೆ ಕೊಲೆ ಆರೋಪ
(48) ದೀಪಾ ಜೊತೆಗೆ ಕ್ಯಾಬ್ ಚಾಲಕ ಸಲುಗೆ ಬೆಳೆಸಿದ್ದ???
ವೈಯಕ್ತಿಕ ಜಗಳ , ದ್ವೇಷದಿಂದ ಕೊಲೆ ಆರೋಪ
ಕಂಪನಿಯ ಕ್ಯಾಬ್ ಚಾಲಕ (22) ಭೀಮಾರಾಯ್ ಅರೆಸ್ಟ್
ಮಹಿಳಾ ಲೆಕ್ಕಾಧಿಕಾರಿಯನ್ನ ಕಂಪನಿಯ ಕ್ಯಾಬ್ ಚಾಲಕ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಹೊಸಕೋಟೆಯ ಬಳಿ ನಡೆದಿದೆ..
48 ವರ್ಷದ ತಮಿಳುನಾಡು ಮೂಲದ ದೀಪ ಮೃತ ಮಹಿಳೆ , 22 ವರ್ಷದ ಕಲಬರುಗಿ ಮೂಲದ ಕ್ಯಾಬ್ ಚಾಲಕ ಭೀಮಾರಾಯ್ ಬಂಧಿತ ಆರೋಪಿ..
ದೀಪಾರನ್ನ ಹತ್ಯೆಗೈದು ಹಳ್ಳದಲ್ಲಿ ಬಿಸಾಡಿ ಭಿಮಾರಾಯ್ ಎಸ್ಕೇಪ್ ಆಗಿದ್ದ.. ಇದೀಗ ಆತನನ್ನ ಬಂಧಿಸುವಲ್ಲಿ ಬಾಗಲೂರು ಪೊಲೀಸರು ಯಶಸ್ವಿಯಾಗಿದ್ದಾರೆ..
ದೀಪಾ ಅವರಿಗೆ ತಂದೆ ತಾಯಿ ಇರಲಿಲ್ಲ. ಚಿಕ್ಕಪ್ಪ ಆಶ್ರಯದಲ್ಲಿ ಬೆಳೆದಿದ್ದರು. ಕೆಲಸಕ್ಕೆ ಸೇರಿದ ಮೇಲೆ, ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ಪ್ರತ್ಯೇಕವಾಗಿ ವಾಸವಿದ್ದರು.
ಅವಿವಾಹಿತರಾಗಿದ್ದ ಅವರು, ನಿತ್ಯವೂ ಕ್ಯಾಬ್‌ನಲ್ಲಿ ಕೆಲಸಕ್ಕೆ ಹೋಗಿಬರುತ್ತಿದ್ದರು. ಇವರನ್ನು ಕಚೇರಿಗೆ ಕರೆದೊಯ್ಯುತ್ತಿದ್ದ ಆರೋಪಿ ಭೀಮರಾಯ್ ಜೊತೆಗೆ ಸಲುಗೆ ಬೆಳೆದಿತ್ತು ಎನ್ನಲಾಗಿದೆ.. ಇಬ್ಬರೂ ಆಗಾಗ ಜಗಳ ಮಾಡಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ..
ಫೆ. 27ರಂದು ದೀಪಾ ನಾಪತ್ತೆಯಾಗಿದ್ದ ಬಗ್ಗೆ ಅವರ ಚಿಕ್ಕಪ್ಪ, ಇಂದಿರಾನಗರ ಠಾಣೆಗೆ ದೂರು ನೀಡಿದ್ದರು. ಸಾತನೂರು ಹೊಸಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಫೆ. 28ರಂದು ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ಗುರುತು ಪತ್ತೆಯಾಗಿರಲಿಲ್ಲ.
ಮೃತದೇಹವನ್ನು ಆಸ್ಪತ್ರೆಯಲ್ಲಿ ಇರಿಸಿ, ಎಲ್ಲ ಠಾಣೆಗಳಿಗೆ ಫೋಟೊ ಸಮೇತ ಮಾಹಿತಿ ರವಾನಿಸಲಾಗಿತ್ತು. ಇಂದಿರಾನಗರ ಪೊಲೀಸರು, ದೀಪಾ ಮೃತದೇಹವೆಂದು ಅನುಮಾನ ವ್ಯಕ್ತಪಡಿಸಿದ್ದರು. ಸಂಬಂಧಿಕರನ್ನು ಆಸ್ಪತ್ರೆಗೆ ಕರೆಸಿದಾಗ, ಮೃತದೇಹ ಗುರುತಿಸಿದ್ದಾರೆ..
ಫೆ. 27ರಂದು ಸಂಜೆ ದೀಪಾ ಅವರನ್ನು ಕ್ಯಾಬ್‌ನಲ್ಲಿ ಕರೆದೊಯ್ಯುತ್ತಿದ್ದ ಆರೋಪಿ, ಮಾರ್ಗಮಧ್ಯೆ ಜಗಳ ಮಾಡಿದ್ದ. ಹಲಸೂರು ಠಾಣೆ ವ್ಯಾಪ್ತಿಯ ಕೇಂಬ್ರಿಡ್ಜ್ ರಸ್ತೆಯಲ್ಲಿ ಕ್ಯಾಬ್ ನಿಲ್ಲಿಸಿದ್ದ.
ಆತನ ವರ್ತನೆಯಿಂದ ಕೋಪಗೊಂಡಿದ್ದ ದೀಪಾ, ಕ್ಯಾಬ್‌ನಿಂದ ಇಳಿದು ನಡೆದುಕೊಂಡು ಹೊರಟಿದ್ದರು. ನನ್ನ ಜೊತೆ ಮಾತನಾಡಬೇಡ.
ಕರೆ ಸಹ ಮಾಡಬೇಡ. ನಿನ್ನ ನಂಬರ್ ಬ್ಲಾಕ್ ಮಾಡುತ್ತೇನೆ ಎಂದಿದ್ದು , ಅಷ್ಟಕ್ಕೇ ಕೋಪಗೊಂಡ ಆರೋಪಿ, ಕ್ಯಾಬ್ ನಲ್ಲಿದ್ದ ರಾಡ್ ನಿಂದ ದೀಪಾ ಮುಖಕ್ಕೆ ಹೊಡೆದಿದ್ದು ಅವರ ವೇಲ್ ನಿಂದಲೇ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿದ್ದಾನೆ.
ನಂತರ ಸಾತನೂರು ಹೊಸಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ..
Hosakote: Cab driver kills woman accountant for not talking.