ಬೆಂಗಳೂರಿನಲ್ಲಿ ಬ್ಯಾಚುಲರ್ ಗಳಿಗೆ ಮನೆ ನೀಡುವುದಿಲ್ಲ. ಏಕೆಂದರೆ, ಅವರಿಗೆ ಮನೆ ನೀಡಿದರೆ, ಮಾಲೀಕರಿಗೆ ತಮ್ಮ ಮನೆಯ ಮೇಲೆಯೇ ಚಿಗುಪ್ಸೆ ಬಂದಂತಾಗುತ್ತದೆ. ಸದ್ಯ ಮಾಲೀಕರೊಬ್ಬರು ಇಂತಹ ಪ್ರಸಂಗವೊಂದನ್ನು ಬೆಳಕಿಗೆ ಬಂದಿದ್ದಾರೆ.
ಟ್ವೀಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಬ್ಯಾಚುಲರ್ಸ್ ಮನೆ ಖಾಲಿ ಮಾಡಿ ಹೋದ ನಂತರ ಫೋಟೋಗಳನ್ನು ಮಾಲೀಕರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. 2 ಬಿಎಚ್ಕೆ ಫ್ಲಾಟ್ ಅನ್ನು ಎಮ್ಎನಿಸಿ ಕಂಪನಿಯಲ್ಲಿ ಕೆಲಸ ಮಾಡುವ ಬ್ಯಾಚುಲರ್ಗೆ ಬಾಡಿಗೆ ನೀಡಿದ್ದರಂತೆ. 4 ತಿಂಗಳು ಬಾಡಿಗೆ ಕಟ್ಟುಕೊಂಡು ಆ ಯುವಕ ಅಲ್ಲಿಯೇ ಇದ್ದ. ಆದರೆ, ಇದ್ದಕ್ಕಿದ್ದಂತೆ ಮನೆ ಖಾಲಿ ಮಾಡಿಕೊಂಡು ಹೋಗಿದ್ದಾನೆ.
ಅಡ್ವಾನ್ಸ್ ಹಣ ಹಿಂದಿರುಗಿಸಲು ಬಂದ ಮಾಲೀಕನಿಗೆ ಬಿಗ್ ಶಾಕ್ ಎದುರಾಗಿದೆ. ಮನೆ ತುಂಬೆಲ್ಲಾ ಬಿಯರ್ ಬಾಟಲ್ಗಳು. ಕೊಳಕು ಬೆಡ್, ಮನೆ ತುಂಬೆಲ್ಲಾ ಬರೀ ಬಿಯರ್ ಬಾಟಲ್ಗಳೇ ತುಂಬಿ ಹೋಗಿತ್ತಂತೆ.
ಮನೆ ಬಾಡಿಗೆಗೆ ಬಂದಾಗಿನಿಂದಲೂ ಈ ಯುವಕ ಮನೆಯನ್ನೇ ಸ್ವಚ್ಛಗೊಳಿಸಲ್ಲವಂತೆ. ಕೇವಲ ಕುಡಿಯಲು ಮಾತ್ರ ಈ ಮನೆ ಬಳಕೆ ಮಾಡಿದ್ದಾನೆ ಎನ್ನಲಾಗಿದೆ. ಇಡೀ ಜಾಗ ಖಾಲಿ ಮದ್ಯದ ಬಾಟಲಿಗಳಿಂದ ತುಂಬಿತ್ತು. ಕಿಟಕಿಗಳು ತೆರೆದಿದ್ದರಿಂದ ಪಾರಿವಾಳಗಳು ಎಲ್ಲೆಂದರಲ್ಲಿ ಬಂದು ಮಲವಿಸರ್ಜನೆ ಮಾಡಿವೆ. ಮನೆ ಗಬ್ಬು ನಾರುತ್ತಿತ್ತಂತೆ. ಈ ಕಾರಣಕ್ಕಾಗಿಯೇ ಬ್ಯಾಚುಲರ್ ಗಳಿಗೆ ಮನೆ ಬಾಡಿಗೆ ಕೊಡುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.








