ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ನಿಮ್ಮ ಕೊಡುಗೆಗಳನ್ನು ಹೇಗೆ ನೀಡಬಹುದು?
ಅಯೋಧ್ಯೆ, ಅಗಸ್ಟ್ 4: ಅಯೋಧ್ಯೆಯ ರಾಮ ಲಲ್ಲಾಗೆ ಮೀಸಲಾಗಿರುವ ಭವ್ಯ ದೇವಾಲಯದ ಭೂಮಿ ಪೂಜೆ ಆಗಸ್ಟ್ 5 ರಂದು ನಡೆಯಲಿದೆ. ಮಂದಿರ ನಿರ್ಮಾಣವು ಅದರ ನಂತರ ಪ್ರಾರಂಭವಾಗಲಿದೆ. ರಾಮ ಜನ್ಮಭೂಮಿ (ಶ್ರೀ ರಾಮನ ಜನ್ಮಸ್ಥಳ) ಸ್ಥಳದಲ್ಲಿ ನಿರ್ಮಿಸಲು ಉದ್ದೇಶಿಸಲಾದ ರಚನೆಯನ್ನು ಜಗತ್ತಿನಾದ್ಯಂತದ ಭಕ್ತರು ನೀಡುವ ನಿಧಿಯಿಂದ ಮಾಡಲಾಗುವುದು ಮತ್ತು ನಿರ್ಮಾಣಕ್ಕೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸಲು ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ಸ್ಥಾಪಿಸಲಾಗಿದೆ.
ಟ್ರಸ್ಟ್ ಯಾವುದೇ ಷರತ್ತುಗಳಿಲ್ಲದೆ ಯಾವುದೇ ವ್ಯಕ್ತಿಯಿಂದ ನಗದು ಅಥವಾ ಸ್ಥಿರ ಆಸ್ತಿಗಳನ್ನು ಒಳಗೊಂಡಂತೆ ಯಾವುದೇ ರೀತಿಯ ದೇಣಿಗೆ, ಬೆಂಬಲ ಮತ್ತು ಅನುದಾನವನ್ನು ಸ್ವೀಕರಿಸುತ್ತದೆ. ಈ ಟ್ರಸ್ಟ್ ಆರಂಭದಲ್ಲಿ ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರದ ಅಧ್ಯಕ್ಷ ಮತ್ತು ಟ್ರಸ್ಟಿಯಾಗಿ ನೇಮಕಗೊಂಡಿರುವ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕೆ ಪರಾಸರನ್ ಅವರ ನಿವಾಸದಿಂದ ಕಾರ್ಯನಿರ್ವಹಿಸಲಿದೆ.
ಮೊರಾರಿ ಬಾಪು ಅವರಂತಹ ಆಧ್ಯಾತ್ಮಿಕ ಗುರುಗಳು, ಸೆಲೆಬ್ರಿಟಿಗಳು, ರಾಜಕಾರಣಿಗಳು ಮತ್ತು ಭಕ್ತರು ತಮ್ಮ ಕೊಡುಗೆಗಳನ್ನು ನೀಡಿದ್ದಾರೆ.
ರಾಮ ಲಲ್ಲಾ ಜನಿಸಿದ ಅಯೋಧ್ಯೆಯ ಪವಿತ್ರ ಭೂಮಿಯಲ್ಲಿ ಪವಿತ್ರ ಮಂದಿರ ನಿರ್ಮಾಣಕ್ಕೆ ನಿಮ್ಮ ಕೊಡುಗೆಯನ್ನು ಇಲ್ಲಿ ನೀಡಬಹುದು.
ದೇಣಿಗೆಗೆ ಸಂಬಂಧಿಸಿದ ಎಲ್ಲಾ ವಿವರಗಳಿಗಾಗಿ ಈ ಲಿಂಕ್ ಅನ್ನು ಪರಿಶೀಲಿಸಿ.
https://srjbtkshetra.org/donation-options/
https://srjbtkshetra.org/donation-options/
ಆಗಸ್ಟ್ 5 ರಂದು ನಡೆಯುವ ಭೂಮಿ ಪೂಜೆ ಸಮಾರಂಭ ಮತ್ತು ಅಡಿಪಾಯ ಹಾಕುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಐತಿಹಾಸಿಕ ದಿನಕ್ಕಾಗಿ ಹಲವಾರು ವ್ಯವಸ್ಥೆಗಳನ್ನು ಮಾಡಲಾಗಿದೆ. ಭಾರತದ ಎಲ್ಲ ಪುಣ್ಯ ನದಿಗಳ ಪುಣ್ಯ ತೀರ್ಥ ಸಂಪ್ರೋಕ್ಷಣೆ ಮಾಡಿ ಧಾರ್ಮಿಕ ಕಾರ್ಯ ನಡೆಯಲಿದೆ. ದೇಶದ ಎಲ್ಲ ಪುಣ್ಯ ಕ್ಷೇತ್ರಗಳ ಮೃತ್ತಿಕೆಯನ್ನು ಸೇರಿಸಿ ಭೂಮಿ ಪೂಜೆ ನೆರವೇರಲಿದೆ.